ಥೈಲ್ಯಾಂಡ್‍ನ ನೂತನ ಪ್ರಧಾನಿಯಾಗಿ ಪೆಟೊಂಗ್‍ಟರ್ನ್ ಶಿನವತ್ರಾ
Update: 2024-08-16 16:32 GMT
ಬ್ಯಾಂಕಾಕ್ : ಥೈಲ್ಯಾಂಡ್‍ನ ನೂತನ ಪ್ರಧಾನಿಯಾಗಿ 37 ವರ್ಷದ ಪೆಟೊಂಗ್‍ಟರ್ನ್ ಶಿನವತ್ರಾರನ್ನು ದೇಶದ ಸಂಸತ್ ಆಯ್ಕೆ ಮಾಡಿದೆ. ಮಾಜಿ ಪ್ರಧಾನಿ ಥಕ್ಸಿನ್ ಶಿವನತ್ರಾ ಅವರ ಪುತ್ರಿಯಾಗಿರುವ ಪೆಟೊಂಗ್‍ಟರ್ನ್ ಥೈಲ್ಯಾಂಡ್‍ನ ಅತ್ಯಂತ ಕಿರಿಯ ಪ್ರಧಾನಿ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.
ಶಿನವತ್ರಾ ಕುಟುಂಬದ ಮೂರನೇ ನಾಯಕಿಯಾಗಿರುವ ಪೆಟೊಂಗ್‍ಟರ್ನ್ ಆಡಳಿತಾರೂಢ ಫ್ಯೂ ಥಾಯ್ ಪಕ್ಷದ ಮುಖಂಡೆ, ಆದರೆ ಚುನಾಯಿತ ಸಂಸದೆಯಲ್ಲ. ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಎರಡು ದಿನದ ಶ್ರೇತ್ತಾ ಥವಿಸಿನ್‍ರನ್ನು ಸಾಂವಿಧಾನಿಕ ನ್ಯಾಯಾಲಯ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿತ್ತು.