ಪಾಕ್: ಚುನಾವಣೆ ವಿಳಂಬಿಸುವ ನಿರ್ಣಯ ತಿರಸ್ಕರಿಸಿದ ಚುನಾವಣಾ ಆಯೋಗ
Update: 2024-01-16 18:16 GMT
ಇಸ್ಲಮಾಬಾದ್: ಫೆಬ್ರವರಿ 8ಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿಳಂಬವನ್ನು ಕೋರಿ ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಸಂಸತ್ ಅಂಗೀಕರಿಸಿದ ನಿರ್ಣಯವನ್ನು ಚುನಾವಣಾ ಆಯೋಗ ತಿರಸ್ಕರಿಸಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿರುವುದರಿಂದ ಯೋಜಿತ ಚುನಾವಣೆಯನ್ನು ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿದೆ.
ಚುನಾವಣೆಯನ್ನು ವಿಳಂಬಿಸುವಂತೆ ಕೋರಿದ ನಿರ್ಣಯಕ್ಕೆ ಜನವರಿ 5 ರಂದು ಸಂಸತ್‍ನ ಮೇಲ್ಮನೆಯಲ್ಲಿ ಅನುಮೋದನೆ ದೊರಕಿತ್ತು. ಆದರೆ ನಿರ್ಣಯ ಅನುಮೋದನೆಗೊಂಡಾದ ಮೇಲ್ಮನೆಯ 100 ಸದಸ್ಯರಲ್ಲಿ ಕೇವಲ 14 ಮಂದಿ ಮಾತ್ರ ಹಾಜರಿದ್ದು ನಿರ್ಣಯದ ಪರ ಮತ ಚಲಾಯಿಸಿದ್ದರು. ನಿರ್ಣಯವನ್ನು ಪರಿಶೀಲಿಸಿದ ಚುನಾವಣಾ ಆಯೋಗ, ಈ ಹಂತದಲ್ಲಿ ಚುನಾವಣೆಯನ್ನು ವಿಳಂಬಿಸುವುದು ಸೂಕ್ತವಲ್ಲ ಎಂದು ಹೇಳಿದೆ.