ಪಾಕಿಸ್ತಾನ | ಮಂಕಿಪಾಕ್ಸ್ ಪ್ರಕರಣ 4ಕ್ಕೆ ಏರಿಕೆ
Update: 2024-08-31 16:41 GMT
ಇಸ್ಲಾಮಾಬಾದ್ : ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಮಂಕಿಪಾಕ್ಸ್ ಸೋಂಕಿನ ಮೂರನೇ ಪ್ರಕರಣ ದಾಖಲಾಗುವುದರೊಂದಿಗೆ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಪ್ರಕರಣದ ಸಂಖ್ಯೆ 4ಕ್ಕೇರಿದೆ ಎಂದು ವರದಿಯಾಗಿದೆ.
ವಿದೇಶದಿಂದ ಆಗಮಿಸಿದ ಪೇಷಾವರದ ನಿವಾಸಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು ಸೋಂಕಿನ ಲಕ್ಷಣ ಕಂಡುಬಂದ ಕಾರಣ ಪೇಷಾವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಪಾಕಿಸ್ತಾನದಲ್ಲಿ ದೃಢಪಟ್ಟಿರುವ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳೂ ವಿದೇಶದಿಂದ ಆಗಮಿಸಿದವರಲ್ಲಿ ದೃಢಪಟ್ಟಿದೆ ಎಂದು ಪಾಕಿಸ್ತಾನದ ಆರೋಗ್ಯ ಇಲಾಖೆ ಹೇಳಿದೆ.