ಫಿಲಡೆಲ್ಫಿಯಾ: ಪತ್ರಕರ್ತನ ಗುಂಡಿಕ್ಕಿ ಹತ್ಯೆ
ನ್ಯೂಯಾರ್ಕ್ : ಅಮೆರಿಕದ ಫಿಲಡೆಲ್ಫಿಯಾದಲ್ಲಿ 39 ವರ್ಷದ ಪತ್ರಕರ್ತ ಜೋಷ್ ಕ್ರೂಗರ್ ನನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರೂಗರ್ ಸೋಮವಾರ ಬೆಳಿಗ್ಗೆ ವಾಟ್‍ಕಿನ್ಸ್ ಸ್ಟ್ರೀಟ್‍ನಲ್ಲಿನ ತನ್ನ ಮನೆಯ ಹೊರಗೆ ನಿಂತಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿ 7 ಬಾರಿ ಗುಂಡು ಹಾರಿಸಿದ್ದು, ಎದೆ ಮತ್ತು ಕಿಬ್ಬೊಟ್ಟೆಗೆ ತೀವ್ರ ಗಾಯಗೊಂಡ ಕ್ರೂಗರ್ ನೆರವಿಗಾಗಿ ಕೂಗಿದ್ದಾರೆ. ಆಗ ದಾಳಿಕೋರ ಪರಾರಿಯಾಗಿದ್ದು ತಕ್ಷಣ ಅಕ್ಕಪಕ್ಕದ ನಿವಾಸಿಗಳು ಕ್ರೂಗರ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
`ದಿ ಫಿಲಡೆಲ್ಫಿಯಾ ಸಿಟಿಝನ್', `ದಿ ಫಿಲಡೆಲ್ಫಿಯಾ ಇನ್‍ಕ್ವಯರ್' ಮುಂತಾದ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಕ್ರೂಗರ್, ನಿರಾಶ್ರಿತರ, ಎಚ್‍ಐವಿ ಸಂತ್ರಸ್ತರ ಪರ ಧ್ವನಿ ಎತ್ತಿದ್ದರು. ಪತ್ರಕರ್ತ ಕ್ರೂಗರ್ ಹತ್ಯೆಯಿಂದ ಆಘಾತವಾಗಿದೆ ಎಂದು ಫಿಲಡೆಲ್ಫಿಯಾ ಮೇಯರ್ ಜಿಮ್ ಕೆನ್ನಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.