ಫಿಲಿಪ್ಪೀನ್ಸ್: ದೋಣಿ ಮುಳುಗಿ ಕನಿಷ್ಟ 26 ಮಂದಿ ಮೃತ್ಯು

Update: 2023-07-28 16:20 GMT

Photo | PTI 

ಮನಿಲಾ : ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಬಳಿಯ ಸರೋವರದಲ್ಲಿ ಸಣ್ಣ ದೋಣಿಯೊಂದು ಮುಳುಗಿದ್ದು 26 ಮಂದಿ ಮೃತಪಟ್ಟಿದ್ದಾರೆ. 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ತಡರಾತ್ರಿ ರಿಝಾಲ್ ಪ್ರಾಂತದಲ್ಲಿ ಬೀಸಿದ ಸುಂಟರಗಾಳಿ ಮತ್ತು ಅಲೆಗಳ ಅಬ್ಬರದಿಂದ ದೋಣಿ ಓಲಾಡತೊಡಗಿದಾಗ ಆತಂಕಗೊಂಡ ಪ್ರಯಾಣಿಕರು ದೋಣಿಯ ಒಂದೇ ಬದಿಯಲ್ಲಿ ಗುಂಪುಸೇರಿದ್ದರಿಂದ ಸಮತೋಲನ ಕಳೆದುಕೊಂಡ ದೋಣಿ ಮುಳುಗಿದ್ದು ದೋಣಿಯಲ್ಲಿದ್ದ 26 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇತರ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ದೋಣಿಯಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗರಿಷ್ಟ 42 ಪ್ರಯಾಣಿಕರನ್ನು ಸಾಗಿಸುವ ಸಾಮಥ್ರ್ಯದ ದೋಣಿಯಲ್ಲಿ ಮಿತಿಮೀರಿದ ಪ್ರಯಾಣಿಕರಿದ್ದರು ಮತ್ತು ಲೈಫ್‍ಜಾಕೆಟ್ ಕೂಡಾ ಧರಿಸಿರಲಿಲ್ಲ ಎಂದು ರಿಝಾಲ್ ಪ್ರಾಂತೀಯ ಪೊಲೀಸರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News