ಫಿಲಿಪ್ಪೀನ್ಸ್: ಪ್ರವಾಹ, ಭೂಕುಸಿತದಿಂದ 20 ಮಂದಿ ಸಾವು
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್‍ನ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹದ ಸಮಸ್ಯೆ ಎದುರಾಗಿದ್ದು ಕನಿಷ್ಟ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಇಲಾಖೆ ಸೋಮವಾರ ವರದಿ ಮಾಡಿದೆ.
ದವಾವೊದೆ ಒರೊ ಪ್ರಾಂತದಲ್ಲಿ 13 ಮಂದಿ ಸಾವನ್ನಪ್ಪಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ನೆರೆಯ ದವಾವೊ ದೆಲ್‍ನೋರ್ಟೆ ಪ್ರಾಂತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಈಶಾನ್ಯ ಮಾನ್ಸೂನ್‍ನಿಂದಾಗಿ ದಕ್ಷಿಣ ಫಿಲಿಪ್ಪೀನ್ಸ್‍ನ ಮಿಂದಾನವೊ ಪ್ರಾಂತದಲ್ಲಿ ಜನವರಿ 28ರಿಂದ ಭಾರೀ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹ ಮತ್ತು ಭೂಕುಸಿತದಿಂದ 8,12,000ಕ್ಕೂ ಅಧಿಕ ಮಂದಿ ಸಮಸ್ಯೆಗೆ ಸಿಲುಕಿದ್ದು ಸುಮಾರು 85,000 ಜನರನ್ನು ತೆರವುಗೊಳಿಸಿ ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಜನವರಿ 2ನೇ ವಾರದಲ್ಲಿಯೂ ದಕ್ಷಿಣ ಫಿಲಿಪ್ಪೀನ್ಸ್‍ನಲ್ಲಿ ಭಾರೀ ಮಳೆ, ಭೂಕುಸಿತದಿಂದ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರದ ಮೂಲಗಳು ಮಾಹಿತಿ ನೀಡಿವೆ.