ಕುವೈತ್ ಸಂಸತ್ತು ವಿಸರ್ಜನೆ: ಸಂವಿಧಾನದ ಕೆಲವು ಭಾಗ ಅಮಾನತು

Update: 2024-05-11 17:11 GMT

ಕುವೈತ್ ನ ಅಮೀರ್ ಶೇಖ್ ಮಿಶಾಲ್ ಅಲ್-ಅಹ್ಮದ್ ಅಲ್-ಸಬಾಹ್ PC : X/@Megatron_ron

ಕುವೈಟ್ ಸಿಟಿ: ಕುವೈತ್ ನ ಅಮೀರ್ ಶೇಖ್ ಮಿಶಾಲ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಶುಕ್ರವಾರ ಕುವೈಟ್ ಸಂಸತ್ತನ್ನು ವಿಸರ್ಜಿಸಿದ್ದು ಸಂವಿಧಾನದ ಕೆಲವು ಭಾಗಗಳನ್ನು ಅಮಾನತುಗೊಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇಶಕ್ಕೆ ಎದುರಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ಈ ಕ್ರಮ ಅನಿವಾರ್ಯವಾಗಿದೆ. ಸಂವಿಧಾನದ ಇತರ ಕೆಲವು ಭಾಗಗಳನ್ನು ನಾಲ್ಕು ವರ್ಷಗಳ ಅವಧಿಗೆ ಅಮಾನತಿನಲ್ಲಿರಿಸಲಾಗಿದೆ' ಎಂದು ಅಮೀರ್ ಅವರನ್ನು ಉಲ್ಲೇಖಿಸಿ ಅಲ್‍ಜಝೀರಾ ವರದಿ ಮಾಡಿದೆ.

ಸರಕಾರಿ ಸ್ವಾಮ್ಯದ ಟಿವಿವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು `ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮಗಳನ್ನು ಬೀರಿದ ಮತ್ತು ನಕಾರಾತ್ಮಕ ವಾಸ್ತವತೆಯನ್ನು ಸೃಷ್ಟಿಸಿದ ಸವಾಲಿನ ಸಮಯವನ್ನು ಕುವೈತ್ ಎದುರಿಸುತ್ತಿದೆ. ದೇಶವನ್ನು , ಅದರ ಉನ್ನತ ಹಿತಾಸಕ್ತಿ ಮತ್ತು ದೇಶದ ಸಂಪನ್ಮೂಲಗಳನ್ನು ರಕ್ಷಿಸಲು ಈ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿರಲಿಲ್ಲ' ಎಂದು ಹೇಳಿದರು. ದೇಶದ ಕ್ಯಾಬಿನೆಟ್ ರಾಷ್ಟ್ರೀಯ ಸಂಸತ್‍ನ ಅಧಿಕಾರವನ್ನು ವಹಿಸಿಕೊಳ್ಳುತ್ತದೆ ಎಂದವರು ಹೇಳಿದ್ದಾರೆ.‌

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News