ಇಸ್ರೇಲ್ ಪ್ರಸ್ತಾಪ ತಿರಸ್ಕರಿಸಿದ ಖತರ್, ಈಜಿಪ್ಟ್
Update: 2025-03-02 22:25 IST

ಕೈರೊ : ಕದನ ವಿರಾಮವನ್ನು ನಾಲ್ಕು ವಾರ ವಿಸ್ತರಿಸುವ ಹಾಗೂ ಪ್ರತೀ ಶನಿವಾರ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಇಸ್ರೇಲ್ ಪ್ರಸ್ತಾಪವನ್ನು ಖತರ್ ಮತ್ತು ಈಜಿಪ್ಟ್ ತಿರಸ್ಕರಿಸಿರುವುದಾಗಿ ವರದಿಯಾಗಿದೆ.
ಪ್ರಥಮ ಹಂತದ ಕದನ ವಿರಾಮವು 15 ತಿಂಗಳ ಗಾಝಾ ಯುದ್ಧಕ್ಕೆ ವಿರಾಮ ನೀಡಿದ ಜತೆಗೆ 33 ಒತ್ತೆಯಾಳುಗಳು(8 ಮೃತದೇಹ) ಹಾಗೂ ಸುಮಾರು 2000 ಫೆಲೆಸ್ತೀನ್ ಕೈದಿಗಳ ಬಿಡುಗಡೆಗೆ ಕಾರಣವಾಗಿತ್ತು. ಜತೆಗೆ, ಸಾವಿರಾರು ಜನರು ಉತ್ತರ ಗಾಝಾದ ತಮ್ಮ ಮನೆಗಳಿಗೆ ಹಿಂತಿರುಗಿದ್ದರು, ಗಾಝಾ ಪ್ರದೇಶಕ್ಕೆ ನೆರವು ಪೂರೈಕೆ ಹೆಚ್ಚಿತ್ತು ಹಾಗೂ ಇಸ್ರೇಲ್ ಪಡೆಗಳು ಬಫರ್ ವಲಯಕ್ಕೆ ಹಿಂದೆ ಸರಿದಿವೆ.