ರಫಾ | ಇಸ್ರೇಲ್ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತ್ಯು

Update: 2024-06-19 16:33 GMT

ಗಾಝಾ ಪಟ್ಟಿ : ಗಾಝಾ ಪ್ರದೇಶದಲ್ಲಿ ಬುಧವಾರ ಇಸ್ರೇಲ್‍ನ ವೈಮಾನಿಕ ದಾಳಿ ಹಾಗೂ ಇಸ್ರೇಲ್‍ನ ತುಕಡಿ ಹಾಗೂ ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಪಶ್ಚಿಮ ರಫಾದಲ್ಲಿ ಇಸ್ರೇಲ್‍ನ ಬಾಂಬ್‍ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಲೆಬನಾನ್‍ನಲ್ಲಿ ಹಿಜ್ಬುಲ್ಲಾ ವಿರುದ್ಧ ಪೂರ್ಣಪ್ರಮಾಣದ ಆಕ್ರಮಣಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದೆ. ಅಕ್ಟೋಬರ್‍ನಿಂದ ಲೆಬನಾನ್‍ನ ಗಡಿಭಾಗದಿಂದ ಹಿಜ್ಬುಲ್ಲಾಗಳಿಂದ ಪ್ರತೀದಿನ ಗುಂಡಿನ ದಾಳಿ ಮುಂದುವರಿದಿರುವುದರಿಂದ ಲೆಬನಾನ್‍ನಲ್ಲಿ ಆಕ್ರಮಣಕ್ಕೆ ಕಾರ್ಯಾಚರಣೆಯ ಯೋಜನೆಗಳನ್ನು ಅನುಮೋದಿಸಲಾಗಿದೆ. ಬುಧವಾರ ತನ್ನ ಯುದ್ಧವಿಮಾನಗಳು ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ದಾಳಿಯನ್ನು ದೃಢೀಕರಿಸಿರುವ ಹಿಜ್ಬುಲ್ಲಾ, ತನ್ನ ಇಬ್ಬರು ಹೋರಾಟಗಾರರು ಸಾವನ್ನಪ್ಪಿರುವುದಾಗಿ ಹೇಳಿದೆ. ಈ ಮಧ್ಯೆ, ಸಿರಿಯಾದ ದಕ್ಷಿಣ ಪ್ರಾಂತದಲ್ಲಿ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಸೇನಾಧಿಕಾರಿ ಸಾವನ್ನಪ್ಪಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News