ಇಸ್ರೇಲ್ ನಿಯಂತ್ರಣದ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ: 11 ಮಕ್ಕಳು ಮೃತ್ಯು

Update: 2024-07-28 02:33 GMT

PC: x.com/cnnbrk

ಗಾಝಾ: ಇಸ್ರೇಲ್ ನಿಯಂತ್ರಣದ ಗೋಲನ್ ಹೈಟ್ಸ್ ಮೇಲೆ ಶನಿವಾರ ನಡೆದ ಭೀಕರ ರಾಕೆಟ್ ದಾಳಿಯಲ್ಲಿ ಕನಿಷ್ಠ 11 ಮಂದಿ ಮಕ್ಕಳು ಮತ್ತು ಹದಿಹರೆಯದವರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಇದು ಉತ್ತರದ ಗಡಿಯಲ್ಲಿ ಲೆಬನಾನ್ ನ ಹಿಜ್ಬುಲ್ಲಾ ಜತೆಗಿನ ಸಂಘರ್ಷ ಆರಂಭವಾದ ಬಳಿಕ ಇಸ್ರೇಲ್ ಗುರಿಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ಮಜ್ದಲ್ ಶಮ್ಸ್ ನಲ್ಲಿ ನಡೆದ ಈ ದಾಳಿಯ ಹಿಂದೆ ಹಿಜ್ಬುಲ್ಲಾದ ಕೈವಾಡವಿದೆ ಎಂದು ಇಸ್ರೇಲ್ ಆಪಾದಿಸಿದೆ. ಆದರೆ ಹಿಜ್ಬುಲ್ಲಾ ಈ ಘಟನೆಯಲ್ಲಿ ಷಾಮೀಲಾಗಿರುವುದನ್ನು ನಿರಾಕರಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಈ ದಾಳಿಗೆ ಹಿಜ್ಬುಲ್ಲಾ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹಮಾಸ್ ಕಳೆದ ಅಕ್ಟೋಬರ್ 7ರಂದು ನಡೆಸಿದ ಭೀಕರ ದಾಳಿಯ ಬಳಿಕ ನಡೆದ ಅತಿದೊಡ್ಡ ದಾಳಿ ಇದಾಗಿದೆ ಎಂದು ಇಸ್ರೇಲಿ ಸೇನೆಯ ಮುಖ್ಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗರಿ ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದಾಗಿ ಅವರು ವಿವರಿಸಿದ್ದಾರೆ.

"ಇಲ್ಲಿ ಹಿಜ್ಬುಲ್ಲಾ ಎಲ್ಲ ಕೆಂಪು ರೇಖೆಗಳನ್ನು ದಾಟಿದೆ. ಈ ಪ್ರತಿಕ್ರಿಯೆ ಇದನ್ನು ಬಿಂಬಿಸುತ್ತದೆ. ಪೂರ್ಣಪ್ರಮಾಣದ ಯುದ್ಧದ ಸಂದರ್ಭಕ್ಕೆ ನಾವು ಸಮೀಪಿಸುತ್ತಿದ್ದೇವೆ" ಎಂದು ವಿದೇಶಾಂಗ ಸಚಿವ ಕಟ್ಜ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News