ಉಕ್ರೇನ್ ಮೇಲೆ ಭಾರೀ ವೈಮಾನಿಕ ದಾಳಿ; ಕ್ವೀವ್ ನತ್ತ ಡ್ರೋನ್, ಕ್ಷಿಪಣಿಗಳನ್ನು ಉಡಾಯಿಸಿದ ರಶ್ಯ
Update: 2024-08-26 07:51 GMT
ಕ್ವೀವ್: ರಶ್ಯದಿಂದ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಯಲಿದೆ ಎಂದು ಉಕ್ರೇನ್ ಸೇನೆ ಎಚ್ಚರಿಕೆ ನೀಡಿದ ಬೆನ್ನಿಗೇ, ಸೋಮವಾರ ಬೆಳಗ್ಗೆ ಕೇಂದ್ರ ಕ್ವೀವ್ ಮೇಲೆ ರಶ್ಯ ಸೇನೆಯು ಕ್ಷಿಪಣಿ, ಡ್ರೋನ್ ಗಳ ಸುರಿಮಳೆಯನ್ನೇ ಸುರಿಸಿದೆ.
ರಶ್ಯ ಬಳಿ 11 ಯುಟಿ-95 ವ್ಯೂಹಾತ್ಮಕ ಬಾಂಬರ್ ವಿಮಾನಗಳಿದ್ದು, ಹಲವಾರು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಉಕ್ರೇನ್ ವಾಯು ಪಡೆ ದೃಢಪಡಿಸಿದೆ. ಉಕ್ರೇನ್ ರಾಜಧಾನಿ ಕ್ವೀನ್ ನ ಹೊರಗೆ ಕ್ಷಿಪಣಿ ದಾಳಿಗಳನ್ನು ತಡೆಯುವ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸದ್ದು ಕೇಳಿ ಬರುತ್ತಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಾಯುವ್ಯ ನಗರವಾದ ಲುತ್ಸ್ಕ್ ನಲ್ಲಿ ಸ್ಫೋಟಗಳು ನಡೆಯುತ್ತಿರುವುದಾಗಿ ಸ್ಥಳೀಯ ಪ್ರಾಧಿಕಾರಗಳು ವರದಿ ಮಾಡಿದ್ದು, ಈ ದಾಳಿಯಲ್ಲಿ ಅಪಾರ್ಟ್ ಮೆಂಟ್ ನ ಭಾಗವೊಂದು ಹಾನಿಗೀಡಾಗಿದೆ ಹಾಗೂ ಸಾವು-ನೋವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿವೆ.