ಹಸೀನಾ ಬೆಂಬಲಿಗ ಶಕ್ತಿಗಳು ಭಾರತವನ್ನು ದಾರಿ ತಪ್ಪಿಸುತ್ತಿವೆ : ಬಿಎನ್‌ಪಿ ನಾಯಕ ಮುಹಮ್ಮದ್ ಚೌಧುರಿ ಆರೋಪ

Update: 2024-08-29 17:48 GMT

ಆಮೀರ್ ಖುಸ್ರು ಮಹಮ್ಮದ್ ಚೌಧುರಿ ,PC:X/@AmirkhosruBNP

ಢಾಕಾ : ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷವನ್ನು ಹೊರತುಪಡಿಸಿದಲ್ಲಿ ಭಾರತ- ಬಾಂಗ್ಲಾ ಸಂಬಂಧಗಳು ಹಳಸಲಿದೆ ಎಂದು ಭಾರತದ ಆಡಳಿತವನ್ನು ತಪುದಾರಿಗೆಳೆಯುವ ‘ಗುಮ್ಮ’ನನ್ನು ಸೃಷ್ಟಿಸುವಲ್ಲಿ ಬಾಂಗ್ಲಾದಕೆಲವು ಮಾಜಿ ರಾಜತಾಂತ್ರಿಕರು, ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಚಿಂತನಚಿಲುಮೆಗಳು ಕಾರಣವೆುಂ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯ ಹಿರಿಯ ನಾಯಕರೊಬ್ಬರು ಆಪಾದಿಸಿದ್ದಾರೆ.

ಖಾಲಿದಾ ಝಿಯಾ ನೇತೃತ್ವದ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಪಕ್ಷದ ನಾಯಕ ಆಮೀರ್ ಖುಸ್ರು ಮಹಮ್ಮದ್ ಚೌಧುರಿ ಅವರು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. ತನ್ನ ನೆರೆಹೊರೆಯರಾಷ್ಟ್ರವಾದ ಭಾರತದ ಜೊತೆ ಬಲವಾದ ನಂಟನ್ನು ಹೊಂದಲು ಬಾಂಗ್ಲಾ ಬಯಸುತ್ತಿದೆ ಎಂದರು. ಹಿಂದೂಗಳು ಸೇರಿದಂತೆ ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಚೌಧುರಿ, ಇದು ತನ್ನ ದೇಶದ ಆಂತರಿಕ ವಿಚಾರವಾಗಿದೆ ಎಂದರು.

ಬಾಂಗ್ಲಾ ದೇಶದ ಜನತೆಯ ನಾಡಿ ಮಿಡಿತವನ್ನು ಅರಿತುಕೊಳ್ಳುವಲ್ಲಿ ಹೊಸದಿಲ್ಲಿಯು ವಿಫಲವಾಗಿದೆ ಎಂದವರು ಹೇಳಿದರು. ಶೇಖ್ ಹಸೀನಾ ಹಾಗೂ ಅವರ ಅವಾಮಿ ಲೀಗ್ ಪಕ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ‘‘ಎಲ್ಲಾ ಮೊಟ್ಟೆಗಳನ್ನು ಒಂದೇ ಬಟ್ಟಿಯಲ್ಲಿರಿಸಿದಂತೆ ಹೊಸದಿಲ್ಲಿಯು ಬಾಂಗ್ಲಾದಲ್ಲಿ ಒಂದೇ ಪಕ್ಷವನ್ನು ಹಾಗೂ ಒಂದೇ ಕುಟುಂಬವನ್ನು ಬೆಂಬಲಿಸುತ್ತಾ ಬಂದಿದೆ’’ ಎಂದರು.

ಬಾಂಗ್ಲಾ ದೇಶದ ಕಟುವಾಸ್ತವದ ಕುರಿತು ಮಾಜಿ ರಾಜತಾಂತ್ರಿಕರು, ಅಧಿಕಾರಿಗಳು, ರಾದಕಾರಣಿಗಳು ಹಾಗೂ ಚಿಂತನ ಚಿಲುಮೆಗಳು ಭಾರತದ ಆಡಳಿತವನ್ನು ದಾರಿತಪ್ಪಿಸಿವೆ. ಇವು ಭಾರತ-ಬಾಂಗ್ಲಾ ಸಂಬಂಧವನ್ನ ಹದಗೆಡಿಸಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News