ಜಪಾನ್ ಪ್ರಧಾನಿಯಾಗಿ ಇಷಿಬಾ ಮರು ಆಯ್ಕೆ

Update: 2024-11-11 17:01 GMT

 ಶಿಗೆರು ಇಷಿಬಾ | PC : AP

ಟೋಕಿಯೊ : ಜಪಾನ್ ನಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿರುವ ನಡುವೆಯೇ ಸೋಮವಾರ ನಡೆದ ಅಧಿವೇಶನದಲ್ಲಿ ಜಪಾನ್ ಸಂಸತ್ತು ಹಾಲಿ ಪ್ರಧಾನಿ ಶಿಗೆರು ಇಷಿಗಾರನ್ನು ಮರು ಆಯ್ಕೆ ಮಾಡಿದೆ.

465 ಸದಸ್ಯ ಬಲದ ಸಂಸತ್ನ ಕೆಳಮನೆಯಲ್ಲಿ ಇಷಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷ ಮತ್ತು ಮಿತ್ರ ಪಕ್ಷ ಕೊಮೈಟೊ ಬಹುಮತ ಕಳೆದುಕೊಂಡಿದ್ದರೂ ರಾಜೀನಾಮೆ ನೀಡಲು ಇಷಿಬಾ ನಿರಾಕರಿಸಿದ್ದು ಇತರರ ಸಣ್ಣ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಬಹುಮತ ಸಾಬೀತು ಪಡಿಸುವುದಾಗಿ ಪಟ್ಟುಹಿಡಿದಿದ್ದರು. ಸೋಮವಾರ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ನಡೆದ ಅಧಿವೇಶನದಲ್ಲಿ ಇಷಿಬಾ ವಿರೋಧ ಪಕ್ಷದ ಪ್ರಮುಖ ನಾಯಕ ಯೊಷಿಹಿಕೊ ನೊಡ ಎದುರು 221-160 ಮತಗಳಿಂದ ಗೆದ್ದು ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News