ನ್ಯೂಯಾರ್ಕ್: ಟರ್ಬನ್ ಧರಿಸಿದ್ದಕ್ಕೆ ಸಿಖ್ ಯುವಕನಿಗೆ ಹಲ್ಲೆ

Update: 2023-10-17 19:04 GMT

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಶಂಕಿತ ದ್ವೇಷಾಪರಾಧ ಪ್ರಕರಣವೊಂದರಲ್ಲಿ, ಟರ್ಬನ್ ಧರಿಸಿದ್ದಕ್ಕೆ ಸಿಖ್ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನ್ಯೂಯಾರ್ಕ್ ನಲ್ಲಿ ವರದಿಯಾಗಿದೆ.

ನ್ಯೂಯಾರ್ಕ್ ನ ಕ್ವೀನ್ಸ್ ನಗರದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಸಿಖ್ ಯುವಕನ ಬಳಿಗೆ ಬಂದ ವ್ಯಕ್ತಿಯೊಬ್ಬ ಟರ್ಬನ್ ತೆಗೆಯುವಂತೆ ಸೂಚಿಸಿದ್ದಾನೆ. ‘ಇದನ್ನು ನಮ್ಮ ದೇಶದಲ್ಲಿ ಧರಿಸುವುದಿಲ್ಲ. ತೆಗೆದು ಬಿಡು’ ಎಂದು ಆದೇಶಿಸಿದ್ದಾನೆ. ಬಳಿಕ ಸಿಖ್ ಯುವಕನ ಮುಖ, ಬೆನ್ನು ಮತ್ತು ತಲೆಯ ಹಿಂಭಾಗಕ್ಕೆ ಮುಷ್ಟಿಯಿಂದ ಪ್ರಹಾರ ನಡೆಸಿದ್ದು ಟರ್ಬನ್ ತೆಗೆಯಲು ಪ್ರಯತ್ನಿಸಿ ಬಸ್ಸಿನಿಂದ ಕೆಳಗಿಳಿದು ತೆರಳಿದ್ದಾನೆ. ಶಂಕಿತ ಆರೋಪಿಯ ಚಹರೆಯ ಬಗ್ಗೆ ಪೊಲೀಸರು ವಿವರಿಸಿದ್ದು ಈತನ ಬಗ್ಗೆ ತಿಳಿದಿದ್ದರೆ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಇದು ದ್ವೇಷಾಪರಾಧದ ಘಟನೆ ಎಂದು ಹೇಳಿರುವ ನ್ಯೂಯಾರ್ಕ್ ಪೊಲೀಸ್ ದ್ವೇಷಾಪರಾಧ ಘಟಕ ತನಿಖೆ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News