ಗುಂಡೇಟಿಗೊಳಗಾದ ಸ್ಲೊವಾಕಿಯಾ ಪ್ರಧಾನಿ | ದೇಹಸ್ಥಿತಿ ಇನ್ನೂ ಗಂಭೀರ

Update: 2024-05-16 16:23 GMT

PC : NDTV

ಬಾನ್‌ಸ್ಕಾ ಬಿಸ್ಟ್ರಿಕಾ (ಸ್ಲೊವಾಕಿಯಾ) : ಬುಧವಾರ ಗುಂಡಿನ ದಾಳಿಗೆ ಒಳಗಾದ ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೋ ಅವಪ ದೇಹಸ್ಥಿತಿ ಸ್ಥಿರವಾಗಿದೆಯಾದರೂ, ಇನ್ನೂ ಗಂಭೀರವಾಗಿದೆಯೆಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೀವ್ರ ಗುಂಡಿನ ಗಾಯಗಳಾಗಿರುವ ಫಿಕೋ ಅವರಿಗೆ ವೈದ್ಯರುಗಳು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆಂದು ರಕ್ಷಣಾ ಸಚಿವ ರಾಬರ್ಟ್ ಕಾಲಿನಾಕ್ ಅವರು ಬಾನ್‌ಸ್ಕಾ ಬಿಸ್ಟ್ರಿಕಾ ನಗರದ ಆಸ್ಪತ್ರೆಯ ಹೊರಭಾಗದಲ್ಲಿ ಜಮಾಯಿಸಿದ್ದ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ರಾಬರ್ಟ್ ಫಿಕೋ ಅವರು ಗುರುವಾರ ಬ್ರಾನ್ ಬಿಸ್ಟ್ರಿಕಾ ನಗರದ ಸಾಂಸ್ಕೃತಿಕ ಭವನದ ಹೊರಭಾಗದಲ್ಲಿ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಅವರೆಡೆಗೆ ಐದು ಗುಂಡುಗಳನ್ನು ಹಾರಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ರಾಜಕೀಯ ಉದ್ದೇಶದಿಂದ ಈ ಹತ್ಯೆ ಯತ್ನ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದ ಆಂತರಿಕ ಸಚಿವ ಸುಟಾಜ್ ಎಸ್ಟೊಕ್ ಬುಧವಾರ ತಿಳಿಸಿದ್ದಾರೆ.

ರಶ್ಯ ಪರ ನಿಲುವು ಹೊಂದಿರುವ ಫಿಕೊ ಅವರು ಕಳೆದ ವರ್ಷ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದರು. ಅವರ ಅಮೆರಿಕ ವಿರೋಧಿ ನಿಲುವು, ಯುರೋಪ ಒಕ್ಕೂಟದ ಇತರ ಸದಸ್ಯರಾಷ್ಟ್ರಗಳಿಗೆ ಕಳವಳವನ್ನುಂಟು ಮಾಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News