ಟೆಕ್ಸಾಸ್ | ರೇಡಿಯೊ ಟವರ್ ಗೆ ಅಪ್ಪಳಿಸಿದ ಹೆಲಿಕಾಪ್ಟರ್ ; ನಾಲ್ವರು ಮೃತ್ಯು

Update: 2024-10-21 15:43 GMT

PC : X 

ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದಲ್ಲಿ ರವಿವಾರ ರಾತ್ರಿ ರೇಡಿಯೊ ಗೋಪುರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿ ಮಗುವಿನ ಸಹಿತ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಹೂಸ್ಟನ್ ನಗರದ ಎರಡನೇ ವಾರ್ಡ್ ನ ಬಳಿ ಖಾಸಗಿ ಹೆಲಿಕಾಪ್ಟರ್ ರೇಡಿಯೊ ಟವರ್ಗೆ ಅಪ್ಪಳಿಸಿದ್ದು ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ ನಾಲ್ವರೂ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲಾಗಿದೆ. ನೆಲದ ಮೇಲಿದ್ದವರು ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News