ಅಮೆರಿಕ: ಟರ್ಕಿಯ ಪ್ರಭಾವೀ ಇಸ್ಲಾಮಿಕ್ ವಿದ್ವಾಂಸ ಫತೇಉಲ್ಲಾ ಗುಲೇನ್ ನಿಧನ

Update: 2024-10-21 10:43 GMT

ಫತೇಉಲ್ಲಾ ಗುಲೇನ್ (Photo credit: Chris Post/AP)

ಅಮೆರಿಕ: ಅಮೆರಿಕ ಮೂಲದ ಟರ್ಕಿಯ ಪ್ರಭಾವೀ ಇಸ್ಲಾಮಿಕ್ ವಿದ್ವಾಂಸ, ಚಿಂತಕ ಹಾಗು ಲೇಖಕ ಫತೇಉಲ್ಲಾ ಗುಲೇನ್ ಅಮೆರಿಕದಲ್ಲಿ ನಿಧನರಾಗಿದ್ದಾರೆಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.

83ರ ಹರೆಯದ ಫತೇಉಲ್ಲಾ ಗುಲೇನ್ ನಿಧನದ ಬಗ್ಗೆ ಹೆರ್ಕುಲ್ ವೆಬ್‌ಸೈಟ್ ಮಾಹಿತಿಯನ್ನು ನೀಡಿದ್ದು, ಫತೇಉಲ್ಲಾ ಗುಲೇನ್ ಅಮೆರಿಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿಸಿದೆ. ಗುಲೆನ್ 1999ರಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಟರ್ಕಿ ಹಾಗು ಅಮೇರಿಕಾದಲ್ಲಿ ಲಕ್ಷಾಂತರ ಅಭಿಮಾನಿಗಳು ಹಾಗು ಬೆಂಬಲಿಗರನ್ನು ಪಡೆದಿರುವ ಅತ್ಯಂತ ಪ್ರಭಾವೀ ರಾಜಕೀಯ ಚಿಂತಕರಾಗಿ ಅವರು ಗುರುತಿಸಲ್ಪಟ್ಟಿದ್ದರು. ಹಲವು ವಿಷಯಗಳಲ್ಲಿ ನೂರಾರು ಲೇಖನಗಳನ್ನು, ಹತ್ತಾರು ಮಹತ್ವದ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಹಲವು ಮಹತ್ವದ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಅವರು ಅಮೇರಿಕಾದಲ್ಲಿ ನೆಲೆಸಿದ್ದರೂ ಟರ್ಕಿಯಲ್ಲಿ ಅತ್ಯಂತ ಪ್ರಭಾವೀ ಚಿಂತಕರಾಗಿ ಮನ್ನಣೆ ಗಳಿಸಿದ್ದರು.

ಗುಲೆನ್ ಟರ್ಕಿಯಲ್ಲಿ ಮತ್ತು ಅದರಾಚೆಗೆ ಪ್ರಬಲವಾದ ಇಸ್ಲಾಮಿಕ್ ಚಳವಳಿಯಾದ 'ಗುಲೇನ್ ಚಳವಳಿ' ಅಥವಾ 'ಹಿಜ್ಮತ್' ಅನ್ನು ಪ್ರಾರಂಭಿಸಿದ್ದರು. ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ವಿರುದ್ಧ ದಂಗೆಯ ಯತ್ನದ ಆರೋಪ ಅವರ ಮೇಲಿತ್ತು. ಆದರೆ ಈ ಆರೋಪವನ್ನು ಅವರು ನಿರಾಕರಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News