ಕಮಲಾ ಹ್ಯಾರಿಸ್ ಗೆ ಬೆಂಬಲ ಸೂಚಿಸಿದ ಒಬಾಮ ದಂಪತಿ

Update: 2024-07-26 21:45 IST
ಕಮಲಾ ಹ್ಯಾರಿಸ್ ಗೆ ಬೆಂಬಲ ಸೂಚಿಸಿದ ಒಬಾಮ ದಂಪತಿ

 ಒಬಾಮ ಮತ್ತು ಅವರ ಪತ್ನಿ ಮಿಚೆಲ್  ,  ಕಮಲಾ ಹ್ಯಾರಿಸ್ | PTI 

  • whatsapp icon

ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಚೆಲ್ ಶುಕ್ರವಾರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ್ದಾರೆ.

“ನಿಮ್ಮನ್ನು ಅಧ್ಯಕ್ಷೀಯ ಸ್ಥಾನಕ್ಕೆ ಅನುಮೋದಿಸಲು ನನಗೆ ಮತ್ತು ಪತ್ನಿ ಮಿಚೆಲ್ಗೆ ಹೆಮ್ಮೆಯಾಗುತ್ತಿದೆ. ಉನ್ನತ ಹುದ್ದೆಗೆ ನೀವು ತಲುಪಲು ನಮ್ಮಿಂದ ಸಾಧ್ಯವಿರುವ ನೆರವನ್ನು ನೀಡುತ್ತೇವೆ” ಎಂದು ಕಮಲಾ ಹ್ಯಾರಿಸ್ಗೆ ಕರೆ ಮಾಡಿದ ಬರಾಕ್ ಒಬಾಮಾ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. 2016ರಲ್ಲಿ ಹಿಲರಿ ಕ್ಲಿಂಟನ್ ಮತ್ತು 2020ರಲ್ಲಿ ಜೋ ಬೈಡನ್ ಪರ ಒಬಾಮಾ ದಂಪತಿ ಪ್ರಚಾರ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News