ಕನ್ಸರ್ವೇಟಿವ್ ಒತ್ತಡದ ನಡುವೆಯೂ ಅವಿಶ್ವಾಸ ನಿರ್ಣಯದಲ್ಲಿ ಟ್ರೂಡೊ ಬಚಾವ್

Update: 2024-09-26 09:02 IST
ಕನ್ಸರ್ವೇಟಿವ್ ಒತ್ತಡದ ನಡುವೆಯೂ ಅವಿಶ್ವಾಸ ನಿರ್ಣಯದಲ್ಲಿ ಟ್ರೂಡೊ ಬಚಾವ್

Photo: twitter/maveinlux

  • whatsapp icon

ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧ ಬುಧವಾರ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಿದೆ. ಅವಿಶ್ವಾಸ ನಿರ್ಣಯದ ಪರ 120 ಮಂದಿ ಮತ ಚಲಾಯಿಸಿದರೆ, ವಿರುದ್ಧ 211 ಸದಸ್ಯರು ಮತ ಚಲಾಯಿಸಿದರು. ಲಿಬರಲ್ಸ್ ಮತ್ತು ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ ಡಿಪಿ) ನಡುವಿನ ಮೈತ್ರಿ ಒಪ್ಪಂದ ಇತ್ತೀಚೆಗೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಪ್ರಮುಖ ವಿರೋಧ ಪಕ್ಷದ ಮುಖಂಡ ಪೀರ್ ಪೊಲಿವೆರ್ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ಮಂಗಳವಾರ ಪೊಲಿವೇರ್ ಮಂಡಿಸಿದ ಅವಿಶ್ವಾಸ ನಿರ್ಣಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಹೆಚ್ಚುತ್ತಿರುವ ಜೀವನವೆಚ್ಚ, ವಸತಿ ಸಮಸ್ಯೆ, ಏರಿಕೆಯಾಗುತ್ತಿರುವ ಅಪರಾಧ ದರವನ್ನು ನಿಯಂತ್ರಿಸುವಲ್ಲಿ ಟ್ರೂಡೊ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.

"ಒಂಬತ್ತು ವರ್ಷಗಳ ಲಿಬರಲ್ ಆಡಳಿತದ ಬಳಿಕ, ಕೆನಡಾದ ವಿಶ್ವಾಸ ಕುಸಿದಿದೆ. ಟ್ರೂಡೊ ನಾಯಕತ್ವದಲ್ಲಿ ದೇಶದ ಸಾಲದ ಹೊರೆ ದುಪ್ಪಟ್ಟಾಗಿದೆ. ಟ್ರುಡೇವ್ ಭರವಸೆ ನೀಡಿದ್ದ ಇಂಗಾಲ ಉಗುಳಿವಿಕೆಯ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ಸಾಮಾನ್ಯಜ್ಞಾನ ತೆರಿಗೆಯೋಜನೆ, ಮನೆಗಳನ್ನು ನಿರ್ಮಿಸುವ ಯೋಜನೆ, ಬಜೆಟ್ ನಿಗದಿಪಡಿಸುವುದು, ಅಪರಾಧ ತಡೆಯುವುದು ಎಲ್ಲವೂ ವಿಫಲವಾಗಿವೆ ಎಂದು ಗಂಭೀರ ಆರೋಪ ಮಾಡಿದರು.

ಚುನಾವಣೆಗೆ ಒತ್ತಡ ತರುತ್ತಿರುವ ಪೊಲಿವೆರ್, ಮುಂದಿನ ವಾರ ಮತ್ತೆ ಸರ್ಕಾರ ಕೆಡವುವ ಪ್ರಯತ್ನ ನಡೆಸಲಿದ್ದಾರೆ. ಟ್ರೂಡೊ ಅವರ ಪದಚ್ಯುತಿ ಪ್ರಯತ್ನದ ಹೊರತಾಗಿಯೂ, ಇತರ ವಿರೋಧ ಪಕ್ಷಗಳು ಪೊಲಿವೆರ್ ಅವರ ಬಲಪಂಥೀಯ ಕಾರ್ಯಸೂಚಿಯ ವಿರುದ್ಧ ನಿಂತವು. ಲಿಬರಲ್ ಪಕ್ಷದ ಸಭಾನಾಯಕ ಕರೀನಾ ಗೌಲ್ಡ್ ಅವರು ಕನ್ಸರ್ವೇಟಿವ್ ಪಕ್ಷದ ಪ್ರಯತ್ನವನ್ನು ಖಂಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News