ಇಲಿನಾಯ್ಸ್ ಪ್ರಾಥಮಿಕ ಮತದಾನದಿಂದ ಟ್ರಂಪ್ ಅನರ್ಹ

Update: 2024-02-29 15:10 GMT

ಡೊನಾಲ್ಡ್ ಟ್ರಂಪ್ | Photo: PTI

ನ್ಯೂಯಾರ್ಕ್: ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಇಲಿನಾಯ್ಸ್ ಪ್ರಾಥಮಿಕ ಮತದಾನದಿಂದ ಅನರ್ಹಗೊಳಿಸುವ ಮನವಿಯನ್ನು ನ್ಯಾಯಾಧೀಶೆ ಪುರಸ್ಕರಿಸಿದ್ದಾರೆ.

ಆದರೆ ಟ್ರಂಪ್ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇರುವುದರಿಂದ ನ್ಯಾಯಾಧೀಶರು ತಮ್ಮ ತೀರ್ಪನ್ನು ವಿಳಂಬಿಸಿದ್ದಾರೆ. ಅಧ್ಯಕ್ಷೀಯ ಸ್ಪರ್ಧೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್ ಹಾಗೂ ನಿಕ್ಕಿ ಹ್ಯಾಲೆಯ ನಡುವೆ ಸ್ಪರ್ಧೆಯಿದೆ.

ಇಲಿನಾಯ್ಸ್ ರಾಜ್ಯದಲ್ಲಿ ಮಾರ್ಚ್ 19ರಂದು ನಡೆಯಲಿರುವ ಪ್ರಾಥಮಿಕ ಚುನಾವಣೆ ಮತ್ತು ನವೆಂಬರ್ 5ರಂದು ನಡೆಯಲಿರುವ ಪ್ರಧಾನ ಚುನಾವಣೆಯ ಮತದಾನದಿಂದ ಟ್ರಂಪ್ರನ್ನು ಅನರ್ಹಗೊಳಿಸುವಂತೆ ಕ್ಷೇತ್ರದ ಮತದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ಟ್ರೇಸಿ ಪೋರ್ಟರ್, ಟ್ರಂಪ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇರುವುದರಿಂದ ಸುಪ್ರೀಂಕೋರ್ಟ್ನ ಆದೇಶವನ್ನು ಗಮನಿಸಿದ ಬಳಿಕ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರ ಕಾನೂನು ಸಲಹೆಗಾರರು `ಇದು ಅಸಾಂವಿಧಾನಿಕ ಕ್ರಮವಾಗಿದ್ದು ಇದರ ವಿರುದ್ಧ ತಕ್ಷಣ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಕೊಲರಡೊ ಮತ್ತು ಮೆಯಿನ್ ರಾಜ್ಯಗಳೂ ಟ್ರಂಪ್ರನ್ನು ಮತದಾನದಿಂದ ಅನರ್ಹಗೊಳಿಸಿದ್ದವು. ಆದರೆ ಇದರ ವಿರುದ್ಧ ಟ್ರಂಪ್ ಮೇಲ್ಮನವಿ ಸಲ್ಲಿಸಿದ್ದರಿಂದ ಸುಪ್ರೀಂಕೋರ್ಟ್ ಆದೇಶಕ್ಕೆ ತಡೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News