ಟ್ರಂಪ್ ನಿಧನರಾಗಿದ್ದಾರೆ ಎಂದು ಟ್ವೀಟ್!

Update: 2023-09-20 17:17 GMT

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗನ ‘ಎಕ್ಸ್’ ಖಾತೆಯನ್ನು ಹ್ಯಾಕ್ ಮಾಡಿ, ಟ್ರಂಪ್ ಅವರು ನಿಧನರಾಗಿದ್ದಾರೆ ಎಂದು ದುಷ್ಕರ್ಮಿಗಳು ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಜೂನಿಯರ್ ಅವರ ‘ಎಕ್ಸ್’ ಖಾತೆಯಲ್ಲಿ, ‘ನನ್ನ ತಂದೆ ಡೊನಾಲ್ಡ್ ಟ್ರಂಪ್ ಮೃತಪಟ್ಟಿದ್ದಾರೆ ಎಂಬ ವಿಷಯವನ್ನು ತಿಳಿಸಲು ಅತ್ಯಂತ ದುಃಖವಾಗುತ್ತಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದು ಪೋಸ್ಟ್ ಮಾಡಲಾಗಿದೆ. ಖಾತೆ ಹ್ಯಾಕ್ ಆಗಿದೆ ಎಂಬುವುದು ಗಮನಕ್ಕೆ ಬಂದ ನಂತರ ಟ್ವೀಟ್‌ಗಳನ್ನು ಡಿಲೀಟ್ ಮಾಡಲಾಗಿದೆ.

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಡೊನಾಲ್ಡ್ ಟ್ರಂಪ್‌ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರ ಮಗನ ಹ್ಯಾಕ್‌ ಆಗಿದ್ದ ಖಾತೆಯಿಂದ ಪೋಸ್ಟ್‌ ಆದ ಟ್ವೀಟ್‌ ಒಮ್ಮಲೇ ರಾಜಕೀಯ ತಜ್ಞರು ಬೆಚ್ಚಿ ಬೀಳುವಂತೆ ಮಾಡಿತ್ತು!

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News