ನೈಜರ್‌ನಿಂದ ಸೈನಿಕರನ್ನು ವಾಪಸ್ ಕರೆಸಲು ಅಮೆರಿಕ ನಿರ್ಧಾರ

Update: 2024-04-20 17:05 GMT

ವಾಶಿಂಗ್ಟನ್: ಪಶ್ಚಿಮ ಆಫ್ರಿಕದ ದೇಶ ನೈಜರ್ನಿಂದ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕ ನಿರ್ಧರಿಸಿದೆ. ನೈಜರ್ ದಿನೇ ದಿನೇ ರಶ್ಯದತ್ತ ಮುಖ ಮಾಡುತ್ತಿರುವ ಹಾಗೂ ಪಾಶ್ಚಿಮಾತ್ಯ ದೇಶಗಳಿಂದ ವಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿದೆ.

ನೈಜರ್ನಿಂದ ಸುಮಾರು 1,000 ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕದ ವಿದೇಶಾಂಗ ಇಲಾಖೆ ಒಪ್ಪಿದೆ ಎಂದು ಅಮೆರಿಕದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ನೈಜರ್ನಲ್ಲಿ 2023ರ ಜುಲೈನಿಂದ ಸೇನಾಡಳಿತವಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News