ಫ್ರಾನ್ಸ್: ಒಲಿಂಪಿಕ್ಸ್ ಸ್ಪರ್ಧೆಗಳನ್ನು ಏರ್ಪಡಿಸುವ ಹಲವು ನಗರಗಳಲ್ಲಿ ದೂರಸಂಪರ್ಕ ಲೈನ್‍ ಧ್ವಂಸ

Update: 2024-07-29 16:37 GMT

ಪ್ಯಾರಿಸ್: ಒಲಿಂಪಿಕ್ಸ್ ಸಂಭ್ರಮದಲ್ಲಿರುವ ಫ್ರಾನ್ಸ್ ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆದಿದ್ದು ಒಲಿಂಪಿಕ್ಸ್ ಸ್ಪರ್ಧೆಗಳನ್ನು ಏರ್ಪಡಿಸುವ ಹಲವು ನಗರಗಳಲ್ಲಿ ದೂರಸಂಪರ್ಕ ಲೈನ್‍ಗಳನ್ನು ಧ್ವಂಸಗೊಳಿಸಲಾಗಿದೆ.

ಮೊಬೈಲ್ ಫೋನ್ ಮಾರ್ಗಗಳನ್ನು ಸರಿಪಡಿಸಲಾಗಿದೆ. ಆದರೆ ದಾಳಿಯಿಂದ ಫೈಬರ್ ಲೈನ್‍ಗಳಿಗೆ ವ್ಯಾಪಕ ಹಾನಿಯಾಗಿದೆ. ರವಿವಾರ ರಾತ್ರಿಯ ಬಳಿಕ ನಡೆದಿರುವ ವಿಧ್ವಂಸಕ ಕೃತ್ಯದಲ್ಲಿ ದೂರಸಂಪರ್ಕ ಲೈನ್‍ಗಳಿಗೆ ಹಾನಿಯಾಗಿದೆ. ಕನಿಷ್ಟ 6 ವಿಭಾಗಗಳಲ್ಲಿ ದೂರಸಂಪರ್ಕ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News