ಪಶ್ಚಿಮದಂಡೆ | ಇಸ್ರೇಲ್ ದಾಳಿಯಲ್ಲಿ ಹಮಾಸ್ ಕಮಾಂಡರ್ ಸಹಿತ 5 ಮಂದಿ ಮೃತ್ಯು
Update: 2024-08-03 17:08 GMT
ಗಾಝಾ : ಆಕ್ರಮಿತ ಪಶ್ಚಿಮದಂಡೆಯಲ್ಲಿ ವಾಹನವೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಸಹಿತ 5 ಮಂದಿ ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಸುದ್ದಿಸಂಸ್ಥೆ ವಫಾ ಶನಿವಾರ ವರದಿ ಮಾಡಿದೆ.
ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ವರದಿ ಹೇಳಿದೆ. ಪಶ್ಚಿಮದಂಡೆಯ ತುಲ್ಕರ್ಮ್ ನಗರದಲ್ಲಿ ಹಮಾಸ್ ಹೋರಾಟಗಾರರ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಹೋರಾಟಗಾರರು ಪ್ರಯಾಣಿಸುತ್ತಿದ್ದ ಟ್ರಕ್ ಮೇಲೆ ನಡೆದ ದಾಳಿಯಲ್ಲಿ ತುಲ್ಕರ್ಮ್ ಬ್ರಿಗೇಡ್‍ನ ಕಮಾಂಡರ್ ಸಾವನ್ನಪ್ಪಿರುವುದಾಗಿ ಹಮಾಸ್‍ನ ಮಾಧ್ಯಮ ವರದಿ ಮಾಡಿದೆ.