ಪಶ್ಚಿಮದಂಡೆ | ಇಸ್ರೇಲ್ ದಾಳಿಯಲ್ಲಿ ಇಬ್ಬರು ಮೃತ್ಯು
ಜೆರುಸಲೇಮ್ : ಆಕ್ರಮಿತ ಪಶ್ಚಿಮದಂಡೆಯಲ್ಲಿ ಶನಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ತನ್ನ ಪಡೆಗಳು ಇಬ್ಬರನ್ನು ಹತ್ಯೆ ಮಾಡಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇಸ್ರೇಲ್ ಸಮುದಾಯದವರು ವಾಸಿಸುವ ಪ್ರದೇಶಕ್ಕೆ ನುಗ್ಗಿದ ಓರ್ವ ವ್ಯಕ್ತಿ ಯೋಧರತ್ತ ಗುಂಡಿನ ದಾಳಿ ನಡೆಸಿದಾಗಿ ಸೇನೆ ಪ್ರತಿ ದಾಳಿ ನಡೆಸಿ ಗುಂಡಿಕ್ಕಿ ಹತ್ಯೆ ಮಾಡಿದೆ. ಗುಂಡಿನ ದಾಳಿ ಸಂದರ್ಭ ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬ ಪ್ರಯಾಣಿಸುತ್ತಿದ್ದ ಕಾರು ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಪಶ್ಚಿಮದಂಡೆಯಲ್ಲಿ ನಡೆದ ದಾಳಿಯನ್ನು ಹಮಾಸ್ ಶ್ಲಾಘಿಸಿದ್ದು ` ಇದು ನಮ್ಮ ಜನರು ಮತ್ತು ಪ್ರದೇಶದ ಮೇಲಿನ ಕ್ರೂರ ಆಕ್ರಮಣ ಅಂತ್ಯವಾಗುವವರೆಗೆ ಪ್ರತಿರೋಧ ಮುಂದುವರಿಯುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ' ಎಂದಿದೆ.
ಈ ಮಧ್ಯೆ, ಶನಿವಾರ ಕೇಂದ್ರ ಗಾಝಾದ ನುಸೀರಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿರುವುದಾಗಿ ಅಲ್‍ಜಝೀರಾ ವರದಿ ಮಾಡಿದೆ.