ಟ್ರಂಪ್ ವಿಚಾರಣೆಯ ವೇಳೆ ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಸಾವು

Update: 2024-04-20 16:58 GMT

ಟ್ರಂಪ್ | PC : PTI 

ವಾಶಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ವಿಚಾರಣೆ ನಡೆಯುತ್ತಿದ್ದ ನ್ಯೂಯಾರ್ಕ್ ನ್ಯಾಯಾಲಯವೊಂದರ ಹೊರಗೆ ತನ್ನ ಮೈಮೇಲೆ ಬೆಂಕಿ ಹಚ್ಚಿಕೊಂಡು ಗಂಭೀರ ಗಾಯಗಳಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಂಕಿ ಹಚ್ಚಿಕೊಂಡ ಬಳಿಕ, ಫ್ಲೋರಿಡದ ಸೇಂಟ್ ಆಗಸ್ಟೈನ್ ನಿವಾಸಿ ಮ್ಯಾಕ್ಸ್ ಅಝರೆಲೊರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಶನಿವಾರ ಅಧಿಕಾರಿಗಳು ಘೋಷಿಸಿದ್ದಾರೆ.

ತನ್ನ ವ್ಯವಹಾರದ ತಪ್ಪು ಮಾಹಿತಿಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿ ಟ್ರಂಪ್ ವಿಚಾರಣೆ ನಡೆಯುತ್ತಿದೆ. ಟ್ರಂಪ್ಗೆ ಬೆಂಬಲ ವ್ಯಕ್ತಪಡಿಸಿ ಅಝರೆಲೊ ಆತ್ಮಾಹುತಿ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News