ವಿಶ್ವದ ಅತೀ ಹಿರಿಯ ವ್ಯಕ್ತಿ ಮರಿಯಾ ಬ್ರನ್ಯಾಸ್ ನಿಧನ
Update: 2024-08-20 16:36 GMT
ಮ್ಯಾಡ್ರಿಡ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ಸ್ಪೇನ್‍ನ ಮರಿಯಾ ಬ್ರನ್ಯಾಸ್ 117ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮಂಗಳವಾರ ಹೇಳಿದೆ.
ಮರಿಯಾ ಬ್ರನ್ಯಾಸ್ ನಮ್ಮನ್ನು ಅಗಲಿದ್ದಾರೆ. ತನ್ನ ಬಯಕೆಯಂತೆ ನಿದ್ದೆಯಲ್ಲೇ ಯಾವುದೇ ನೋವಿಲ್ಲದೆ ಶಾಂತರೀತಿಯಲ್ಲಿ ಮರಣ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಎಕ್ಸ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಫ್ರಾನ್ಸ್‍ನ ಕ್ರೈಸ್ತ ಸನ್ಯಾಸಿನಿ ಲೂಸಿ ರ್ಯಾಂಡನ್ ನಿಧನದ ಬಳಿಕ ಮರಿಯಾ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದರು. ಇದೀಗ ಮರಿಯಾ ಮೃತಪಟ್ಟಿರುವುದರಿಂದ ಜಪಾನ್‍ನ ಟೋಮಿಕೋ ಇಟೂಕಾ (116 ವರ್ಷ) ಈ ಪಟ್ಟಕ್ಕೆ ಏರಲಿದ್ದಾರೆ.