ರಶ್ಯ ಸಂಯೋಜಿತ ಆರ್ಥೊಡಾಕ್ಸ್ ಚರ್ಚ್ ನಿಷೇಧಿಸುವ ಕಾನೂನಿಗೆ ಝೆಲೆನ್‍ಸ್ಕಿ ಸಹಿ
Update: 2024-08-24 16:44 GMT
ಕೀವ್: ಉಕ್ರೇನ್‍ನ 33ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹಲವು ರಶ್ಯ ವಿರೋಧಿ ಕಾನೂನುಗಳಿಗೆ ಸಹಿ ಹಾಕಿದ್ದಾರೆ.
ರಶ್ಯ ಸಂಯೋಜಿತ ಆರ್ಥೊಡಾಕ್ಸ್ ಚರ್ಚ್‍ಗಳನ್ನು ಉಕ್ರೇನ್‍ನಲ್ಲಿ ನಿಷೇಧಿಸುವ ಕಾನೂನಿಗೆ ಅಧ್ಯಕ್ಷರು ಸಹಿ ಹಾಕಿದ್ದಾರೆ ಎಂದು ಸಂಸತ್‍ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. 2014ರಿಂದಲೂ ರಶ್ಯದ ಚರ್ಚ್‍ಗಳಿಂದ ಅಂತರ ಕಾಯ್ದುಕೊಳ್ಳಲು ಉಕ್ರೇನ್ ನಿರ್ಧರಿಸಿತ್ತು, ಆದರೆ 2022ರ ರಶ್ಯ ಆಕ್ರಮಣದ ಬಳಿಕ ಈ ಬಗ್ಗೆ ಪ್ರಯತ್ನ ಹೆಚ್ಚಿಸಿತ್ತು. ಜತೆಗೆ, ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‍ಗೆ ಸೇರಲು ಉಕ್ರೇನ್‍ಗೆ ದಾರಿ ಮಾಡಿಕೊಡುವ ಶಾಸನವನ್ನೂ ಅಧ್ಯಕ್ಷರು ಅಂಗೀಕರಿಸಿದ್ದಾರೆ. ಈ ಕ್ರಮವು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‍ನಲ್ಲಿ ಯುದ್ಧಾಪರಾಧಗಳಿಗಾಗಿ ರಶ್ಯವನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.