ಕಲಬುರಗಿಯ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ

Update: 2025-01-13 16:25 GMT

ಕಲಬುರಗಿ : ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವಿವೇಕಾನಂದ ಪಿಯು ಕಾಲೇಜಿನಲ್ಲಿ ಶಿಕ್ಷಣ ಜ್ಞಾನ ಮಾಸಪತ್ರಿಕೆಯ 22ನೇ ವಾರ್ಷಿಕೋತ್ಸವ, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಕಲಬುರಗಿಯ ಅಪ್ಪಾ ಇಂಜಿನಿಯರಿಂಗ್ ಇನ್ಸ್ ಟಿಟ್ಯೂಟ್ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಜಗದೀಶ ಗಾಜರೆ( ಜ್ಞಾನ ಸಿಂಧು ಪ್ರಶಸ್ತಿ), ಖಜೂರಿಯ ಅಂಗನವಾಡಿನ ಕಾರ್ಯಕರ್ತೆ ಸಿದ್ದಮ್ಮ ರವೀಂದ್ರ ಚೆಂಗಾಲೆ( ಜ್ಞಾನ ಚಿಗುರು ಕವಚ ಪ್ರಶಸ್ತಿ), ಪತ್ರಕರ್ತ ಭೀಮಾಶಂಕರ ಫಿರೋಜಾಬಾದ (ಮಾಧ್ಯಮ ರತ್ನ) ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ್, (ಕ.ಕ ಶಿಕ್ಷಕ ಪ್ರತಿಭೆ), ಉದ್ಯಮಿದಾರರಾದ ರಾಮಚಂದ್ರರಾವ, ಸುಹಾಸ್, (ಉದ್ಯಮಿ ರತ್ನ), ಗೀತಾ ಬಿ.ಪಾಟೀಲ್ (ಜ್ಞಾನ ಸಿಂಧು ಪ್ರಶಸ್ತಿ), ಕೃಷಿ ನಾಟ್ಯರಂಗ, ಕೃಷಿ ಮಹಾವಿದ್ಯಾಲಯ ಕಲಬುರಗಿ (ಕಲಾ ರತ್ನ), ಹಾಗೂ ಜೇವರ್ಗಿಯ ಯುವ ಜನಜಾಗೃತಿ ವೇದಿಕೆ ತಂಡಕ್ಕೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಿಕೆಯ ಹೆಚ್.ವಿ.ನಾಗರಾಜ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಸಂಸ್ಥೆಯ ಸಂಸ್ಥಾಪಕ ಎಂ.ಎನ್.ಪಾಟೀಲ, ಹೈದರಾಬಾದ್ ನ ಕೃಷಿ ವಿಜ್ಞಾನಿ ಡಾ.ಮಹಾಂತೇಶ ಶಿರೂರ್, ಆಯ್ಕೆ ಸಮಿತಿ ಚೇರ್ ಪರ್ಸನ್ ಅಕ್ಕನಾಗಮ್ಮ ಎ.ಪಡಶೆಟ್ಟಿ, ಕೆಕೆಸಿಸಿಐ ನಿರ್ದೇಶಕ ಕರಾದ ಅಭಿಜಿತ್ ಪಡಶೆಟ್ಟಿ, ಪ್ರಾಧ್ಯಾಪಕಿ ಅಕ್ಕನಾಗಮ್ಮ ಎ.ಪಡಶೆಟ್ಟಿ, ಜಗದೀಶ್ ಗಾಜರೆ ಮತ್ತಿತರರು ಪ್ರಶಸ್ತಿ ಪ್ರದಾನ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News