ಕಲಬುರಗಿ | ಸ್ವಾಮಿ ವಿವೇಕಾನಂದರ 163ನೇ ಜಯಂತಿ ಆಚರಣೆ

Update: 2025-01-13 16:22 GMT

ಕಲಬುರಗಿ : ಇಲ್ಲಿನ ವಿವೇಕಾನಂದ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯನ್ನು ಬೃಹತ್ ರ್‍ಯಾಲಿ ನಡೆಸುವ ಮೂಲಕ ಆಚರಿಸಲಾಯಿತು.

ಹುಮನಾಬಾದ್ ಬೇಸ್, ಬಂಬೂ ಬಜಾರ್, ಗುಂಜ್ ರಸ್ತೆಯಲ್ಲಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆಯಿಂದ ರ್‍ಯಾಲಿ ಪ್ರಾರಂಭವಾಯಿತು. ಪ್ರೊ.ನರೇಂದ್ರ ಬಡಶೇಷಿ ರ್ಯಾಲಿಗೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಪ್ರೊ.ನರೇಂದ್ರ ಬಡಶೇಷಿ ಕಲಬುರಗಿಯ ಪ್ರಾಂಶುಪಾಲ ಎಂಎಸ್ಐ ಪಿಯು ಕಾಲೇಜು ಮತ್ತು ಸ್ವಾಮಿ ವಿವೇಕಾನಂದರ ಬೋಧನೆಗಳ ತಜ್ಞರು ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರ್‍ಯಾಲಿಗೆ ಚಾಲನೆ ನೀಡಿದರು.

ಡಾ.ಪ್ರವೀಣ್ ನಾಯಕ್, ಕಾಲೇಜಿನ ಪ್ರಾಂಶುಪಾಲ ಡಾ.ಮೋಹನ್ ರಾಥೋಡ್, ಅಜಯಕುಮಾರ್ ಶೆಟ್ಟಿ, ಆಶಿಕ್ ರೆಡ್ಡಿ, ಬಸವರಾಜ ಹಿರೇಮಠ, ಸುರ್ಶನ ಸ್ವಾಮಿ, ರಾಜಶೇಖರ್ ಹವಾಲ್ದಾರ್, ಬಸಯ್ಯ ಸ್ವಾಮಿ, ಅಮರೇಶ, ರಾಜೇಶ್ವರಿ, ನೀಲಮ್ಮ, ಮಹೇಶ ದೇಶಪಾಂಡೆ, ಶ್ರೀರಂಗ ಮಹಾಗಾಂವಕರ್, ಗುರುಪ್ರಸಾದ್ ನಾಗೂರಕರ್, ಕೃಷ್ಣಕುಮಾರ ಕುಮಟೇಕರ್, ವಿವೇಕ ಹೊನ್ಗುಂಟಿಕರ್, ಆಕಾಶ ಕುಲರ್ಣಿ, ಅಶೋಕ್ ಕಾಂಟಿಕರ್, ಸ್ನೇಹಲ್ ಬೋರಗಾಂವ್ಕರ್, ಅಂಬಿಕಾ ಗಣಾಪುರ, ಸ್ವಪ್ನಕುಮಾರಿ ಅಫಜಲಪೂರಕರ, ತೌಸಿಫ್ ಅಂಜುಮ್, ಪ್ರಭಾ ಹೂಗಾರ, ಗಿರೀಶಕುಮಾರ ನವಣಿ, ವೆಂಕಟೇಶಗೌಡ, ಖಜಾಂಚಿ ಶ್ರೀಧರ್, ಉಪಾಧ್ಯಕ್ಷ ಲಕ್ಷ್ಮೀಪ್ರಸಾದ್ ಜಾಜೀ, ಅಧ್ಯಕ್ಷ ಶಿವಲಿಂಗಪ್ಪ ರಾವೂರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.

ಸುಮಾರು 700 ವಿದ್ಯಾರ್ಥಿಗಳು ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರೀಯ ಯುವ ದಿನದ ಬ್ಯಾನರ್ ಗಳೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ದೇಶಭಕ್ತಿ ಗೀತೆಗಳನ್ನು ನುಡಿಸುತ್ತಾ ಮೆರವಣಿಗೆ ನಡೆಸಲಾಯಿತು.

ಸ್ವಾಮಿ ವಿವೇಕಾನಂದರ ಉಲ್ಲೇಖಗಳುಳ್ಳ ಕರಪತ್ರಗಳನ್ನು ರ್‍ಯಾಲಿಯ ಉದ್ದಕ್ಕೂ ಸಾರ್ವಜನಿಕರಿಗೆ ಹಂಚಲಾಯಿತು. ಸುಮಾರು 5,000 ಕರಪತ್ರಗಳನ್ನು ಹಂಚಲಾಯಿತು.

ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪ್ರಾಂಶುಪಾಲರ ಭಾಷಣದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು. ಪ್ರಾಂಶುಪಾಲರಾದ ಡಾ.ಪ್ರವೀಣ್ ನಾಯಕ್ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News