ಕಲಬುರಗಿ | ಜಾಗೃತಿಯಿಂದಲೇ ಏಡ್ಸ್ ನಿಯಂತ್ರಣ ಸಾಧ್ಯ : ದಾನಪ್ಪಗೌಡ ಹಳಿಮನಿ

ಕಲಬುರಗಿ : ಏಡ್ಸ್ ರೋಗ ಹರಡುವಿಕೆಯ ಬಗ್ಗೆ ಅರಿವಿನ ಕೊರತೆಯಿಂದಾಗಿ ಸೋಂಕು ತೀವ್ರವಾಗಿ ಹೆಚ್ಚುತ್ತಿದೆ. ಎಚ್ ಐ ವಿ ಮಾರಕ ಕಾಯಿಲೆಯಾಗಿದ್ದು, ಅಸುರಕ್ಷಿತ ಲೈಂಗಿಕ ಆಕರ್ಷಣೆಗೆ ಒಳಗಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಮತ್ತು ಜಾಗೃಕರಾಗಿರಬೇಕು. ಜಾಗೃತಿಯಿಂದಲೇ ಎಡ್ಸ್ ನಿಯಂತ್ರಿಸಬಹುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜೇವರ್ಗಿ ತಾಲ್ಲೂಕು ಅಧ್ಯಕ್ಷ ದಾನಪ್ಪಗೌಡ ಹಳಿಮನಿ ಹೇಳಿದರು.
ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ (ಎ ಮತ್ತು ಬಿ), ರಾಷ್ಟ್ರೀಯ ಸೇವಾ ಯೋಜನೆ ಘಟಕ(ಎಸ್‍ಎಫ್‍ಯು), ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಲಬುರಗಿ ಆಶ್ರಯದಲ್ಲಿ ಏಡ್ಸ್ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ ಸಸಿಗೆ ನಿರುಣಿಸುವ ಮೂಲಕ ಅವರು ಉದ್ಘಾಟಿಸಿದರು.
ಎಚ್ ಐ ವಿ ಸೋಂಕಿತರನ್ನು ಸಮಾಜ ತಾರತಮ್ಯದಿಂದ ನೋಡುತ್ತಿದ್ದು, ಅವರನ್ನು ಮನುಷ್ಯರಂತೆ ಕಾಣಬೇಕು. ಏಡ್ಸ್ ಪೀಡಿತರ ಬಗ್ಗೆ ಅನುಕಂಪ ಬೇಡ ಬದಲಾಗಿ ಅವಕಾಶಗಳನ್ನ ಮಾಡಿಕೊಡಬೇಕು. ಏಡ್ಸ್ ರೋಗ ಹರಡುವಿಕೆಯ ಬಗ್ಗೆ ಅರಿವಿನ ಕೊರತೆಯಿಂದಾಗಿ ಸೋಂಕು ತೀವ್ರವಾಗಿ ಹೆಚ್ಚುತ್ತಿದೆ. ಎಚ್ ಐ ವಿ ಮಾರಕ ಕಾಯಿಲೆಯಾಗಿದ್ದು, ಅಸುರಕ್ಷಿತ ಲೈಂಗಿಕ ಆಕರ್ಷಣೆಗೆ ಒಳಗಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಮತ್ತು ಜಾಗೃತರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಲಕ್ಷ್ಮಣ ಭೋಸ್ಲೆ, ಎಆರ್‍ಟಿ ಮೆಡಿಕಲ್ ಕಾಲೇಜಿನ ಡಾ.ಸಂಜಯ, ನಿಂಬೆಣ್ಣ ರುದ್ರಪ್ಪಗೋಳ, ಮಹಾದೇವಿ ಧರ್ಗಿ, ಡಾ.ಶರಣಪ್ಪ ಸೈದಾಪುರ, ಡಾ.ಸಂದೀಪ ತಿವಾರಿ, ಡಾ.ಶರಣಪ್ಪ ಗುಂಡಗುರ್ತಿ, ಡಾ.ರಬಿಯ ಬೇಗಂ, ಡಾ.ವಿನೋದಕುಮಾರ ಹತ್ತಿಗೂಡುರ, ಡಾ.ನಾಗರೆಡ್ಡಿ, ಡಾ.ಎನ್.ಶ್ರೀಧರ್, ಡಾ.ನಸೀನ್, ಡಾ.ಭೀಮಣ್ಣ ಬೇಡಕಪಳ್ಳಿ, ಡಾ.ರವಿಂದ್ರ, ಡಾ.ಶಿಲ್ಪಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅನಿತಾ ಹೂಗಾರ ಪ್ರಾರ್ಥಿಸಿದರು, ಅಪರ್ಣಾ ವಂದಿಸಿದರು, ಖಾಜಾವಲಿ ಈಚನಾಳ ನಿರೂಪಿಸಿದರು.