ಕಲಬುರಗಿ | ಕನ್ನಡ ಶಾಲೆ ಉಳಿಸಲು ಪಣತೊಡಿ : ಡಾ.ಮಲ್ಲಿನಾಥ ತಳವಾರ
ಕಲಬುರಗಿ : ಕನ್ನಡ ಶಾಲೆ ಉಳಿಸಲು ಪಣತೊಡಿ. ಕನ್ನಡ ಶಾಲೆಗಳು ಉಳಿದರೆ ಮಾತ್ರ ಉಳಿಗಾಲವಿದೆ. ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಗಂಡಾಂತರವಿದೆ ಎಂದು ಸಾಹಿತಿ ಡಾ.ಮಲ್ಲಿನಾಥ ತಳವಾರ ಹೇಳಿದರು.
ಅವರು ಶಹಾಬಾದ್ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶಹಾಬಾದ್ ವತಿಯಿಂದ ಆಯೋಜಿಸಲಾದ ಶಹಾಬಾದ್ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಮಾರೋಪ ನುಡಿಯನ್ನು ಆಡಿದರು.
ತಾಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಸಂಘಟಿಸಲಾಗಿದೆ. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ನಮ್ಮ ಜವಾಬ್ದಾರಿಯಾಗಿದೆ. ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡಕ್ಕೆ ಉಳಿಗಾಲವಿದೆ. ಆ ನಿಟ್ಟಿನಲ್ಲಿ ನಾವು ಜಾಗೃತರಾಗೋಣ. ಗ್ರಾಮ ಮಟ್ಟದಲ್ಲಿ ಹುಟ್ಟಿಕೊಳ್ಳುವ ಕನ್ನಡದ ಬೇರುಗಳಿಗೆ ನೀರೆರೆದು ಪೂಷಿಸಿ ಗಟ್ಟಿಗೊಳಿಸಿ ಬೆಳೆಸಿದಾಗ ಕನ್ನಡದ ಚಿಂತನೆಗಳು ಹಾಗೂ ನಮ್ಮ ಸಂಸ್ಕೃತಿ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳಣಾಧ್ಯಕ್ಷ ಎಚ್.ಬಿ.ತೀರ್ಥೆ, ಕಸಾಪ ಸಲಹೆಗಾರ ಮರಿಯಪ್ಪ ಹಳ್ಳಿ, ಅಣವೀರ ಇಂಗಿನಶೆಟ್ಟಿ, ಶಿವಾನಂದ ಪಾಟೀಲ, ಅಜೀತ್ ಪಾಟೀಲ, ಮಾಣಿಕ್ ಗೌಡ, ರಾಜು ಮೇಸ್ತ್ರಿ, ಅಣಿರುದ್ರ ಪಾಟೀಲ, ಶಿವಶರಣಪ್ಪ ಕಣಕಿ, ಅಪ್ಪಾರಾವ ಪಾಟೀಲ, ಚಿನ್ನಾಜಿ ಗಾಯಕವಾಡ, ಕುಮಾರ ಚವ್ಹಾಣ, ಶರಣು ಪಗಲಾಪೂರ, ಶ್ರೀಶೈಲಪ್ಪ ಅವಂಟಿ, ನಾಗಣ್ಣಗೌಡ, ನರಸಿಂಹಲೂ ರಾಯಚೂರಕರ್, ಮಹ್ಮದ್ ಬಾಕ್ರೋದ್ದಿನ್, ವಿಜಯಕುಮಾರ ವರ್ಮಾ, ಸುಭಾಷ ಪಂಚಾಳ, ಮುನ್ನಾ ಪಟೇಲ್ ಇತರರು ಇದ್ದರು.
ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿ.ಸಿ.ಇಂಗಿನಶೆಟ್ಟಿ, ಡಾ.ಮಥವಾಲೆ, ಡಾ. ಸದಾನಂದ ಕೋರಿ, ಡಾ.ಎಂ.ಎ.ರಶೀದ್, ಡಾ.ಪಿ.ಎಂ.ಸಜ್ಜನ್, ಸಾಂಸ್ಕೃತಿಕ ಕ್ಷೇತ್ರದ ಬಸವರಾಜ ನಂದಿಧ್ವಜ, ಮೌನೇಶ ಸೋನಾರ, ಪ್ರಮೋದ ನಾಟೀಕಾರ, ರಾಜು ಕೋಬಾಳ, ಸಂಗಯ್ಯಸ್ವಾಮಿ, ಉದಯಕುಮಾರ ಸಾಗರ, ಶರಣಪ್ಪ ದೊಡ್ಡಮನಿ, ಡಾ.ರಹೇಮಾನ ಪಟೇಲ್, ಕೃಷಿ ಕ್ಷೇತ್ರದ ಗುರುಪುತ್ರ ಕರಣಿಕ್, ನಿಂಗಣ್ಣ ಉಪ್ಪಾರ, ರಾಮಣ್ಣ ತೊನಸನಹಳ್ಳಿ, ಶಿವಶಂಕರ ಖೇಣಿ, ಶರಬಣ್ಣ ಮಾವೂರ, ಶಕೀಲ ಸೌದಾಗರ್, ಮಲ್ಲಣ್ಣ ಅಣಕಲ್, ಬಸವರಾಜ ಅಷ್ಟಗಾ, ಕ್ರೀಡಾ ಕ್ಷೇತ್ರದ ಹರ್ಷದ ಹುಸೇನ್, ಹೆಚ್.ವಾಯ್.ರಡ್ಡೇರ್, ಚನ್ನವೀರಪ್ಪ ಪಾಟೀಲ, ಆನಂದ ದೊಡ್ಡಮನಿ, ಚನ್ನಬಸಪ್ಪ ಕೊಲ್ಲೂರ್, ಶಿಕ್ಷಣ ಕ್ಷೇತ್ರದ ನಜೀರ್ ಮುಲ್ಲಾ,ಅಪ್ಪಾರಾವ ಪಾಟೀಲ್ ಇತರರನ್ನು ಸನ್ಮಾನಿಸಲಾಯಿತು.
ಬಸವರಾಜ ಮದ್ರಿಕಿ ನಿರೂಪಿಸಿದರು, ಲೋಹಿತ್ ಕಟಟಿ ಸ್ವಾಗತಿಸಿದರು, ಶರಣು ವಸ್ತ್ರದ್ ನಿರ್ಣಯ ಮಂಡಿಸಿದರು. ನಾಗಣ್ಣ ರಾಂಪೂರೆ ವಂದಿಸಿದರು.