ಕಲಬುರಗಿ | ಸುಳ್ಳು ಆರೋಪ ಹೊರಸಿದ್ದಕ್ಕೆ ಮಾನನಷ್ಟ ಮೊಕದ್ದಮೆಗೆ ಚಿಂತನೆ : ಶಶೀಲ್ ಜಿ.ನಮೋಶಿ

ಶಶೀಲ್ ಜಿ.ನಮೋಶಿ
ಕಲಬುರಗಿ : ಕಾನೂನು ರೀತಿಯಲ್ಲಿ ಅನುಮತಿ ಪಡೆದು ಸಂಸ್ಥೆಯಲ್ಲಿ ಇದ್ದ ನಿಷ್ಪ್ರಯೋಜಕ ದಾಖಲೆಗಳನ್ನು ಸುಟ್ಟು ಹಾಕಿದ್ದನ್ನು ಅವುಗಳು ಮಹತ್ವದ ದಾಖಲೆಗಳೆಂದು ಸುಳ್ಳು ಆರೋಪ ಹೊರಿಸಿದ್ದ ಪ್ರಕರಣಗಳು ಹೈಕೋರ್ಟ್ ರದ್ದು ಪಡಿಸಿ ಆದೇಶ ನೀಡಿದ್ದು ಇದು ಸತ್ಯಕ್ಕೆ ಸಂದ ಜಯ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ತಿಳಿಸಿದ್ದಾರೆ.
ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಭಂಡಾರಿ, ಡಾ.ಸಾಯಿನಾಥ ಆಂದೋಲಾ, ಡಾ.ಶರಣಬಸಪ್ಪ ಹರವಾಳ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು.
2009 ರಿಂದ 2015ರ ಅವಧಿಯಲ್ಲಿ ಸ್ಟೇಫಂಡ್ ಹಗರಣವಾಗಿದೆ ಎಂದು ಆಧಾರ ರಹಿತವಾಗಿ ನನ್ನ ಮೇಲೆ ಹಾಗೂ ಬಸವರಾಜ ಭೀಮಳ್ಳಿ ಹಾಗೂ ಹಿರಿಯ ವೈದ್ಯರ ಮೇಲೆ ದೂರು ದಾಖಲಾದಾಗ ಸುಮಾರು 15 ಜನ ಪೋಲಿಸರ ತಂಡ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಸಂಬಂಧವಿಲ್ಲದ ಸಂಸ್ಥೆಯ ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿತು.
ಇಂದು ಉಚ್ಛ ನ್ಯಾಯಾಲಯ ನನ್ನ ಮೇಲೆ ಮಾಡಿರುವ ಸುಳ್ಳು ಆರೋಪಗಳಿಗೆ ಕಪಾಳ ಮೋಕ್ಷ ಮಾಡಿದೆ ಯಾವಾಗಲೂ ಸತ್ಯಕ್ಕೆ ಗೆಲುವು ಎಂದು ಸಾರಿದೆ.
ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ಯಾರೆ ಎಷ್ಟು ಪ್ರಯತ್ನಿಸಿದರೂ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೆವೆ. ಸುಳ್ಳನ್ನು ಸತ್ಯವೆಂದು ನಂಬಿಸಿ ನಮ್ಮ ಮುಖಕ್ಕೆ ಮಸಿ ಬಳೆಯಲು ಪ್ರಯತ್ನಿಸಿದವರ ಮಸಿ ಹೆಚ್ಚಿಸಿಕೊಂಡಿರುವ ಮುಖವಾಡ ಬಯಲಾಗಿದೆ
ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಿ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ನಮ್ಮ ಸಮಯಹರಣ ಮಾಡಿದ್ದಾಕ್ಕಾಗಿ ವೈಯಕ್ತಿಕವಾಗಿಯು ಹಾಗೂ ಸಂಸ್ಥಗೆ ಹಿನ್ನಡೆ ಮಾಡಲು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.