ಕಲಬುರಗಿ | ಚಿಂಚೋಳಿ ವಿದ್ಯಾರ್ಥಿಗಳ ಒಕ್ಕೂಟದ ತಾಲೂಕು ಪದಾಧಿಕಾರಿಗಳ ಆಯ್ಕೆ

Update: 2025-02-08 17:52 IST
ಕಲಬುರಗಿ | ಚಿಂಚೋಳಿ ವಿದ್ಯಾರ್ಥಿಗಳ ಒಕ್ಕೂಟದ ತಾಲೂಕು ಪದಾಧಿಕಾರಿಗಳ ಆಯ್ಕೆ
  • whatsapp icon

ಕಲಬುರಗಿ : ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿ ನೂತನ ಪದಾಧಿಕಾರಿಗಳನ್ನು ನಿಕಟಪೂರ್ವ ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ಹಾಗೂ ನವ ಕರ್ನಾಟಕ ಜನಪರ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶಿವಪ್ರಕಾಶ ಕಟ್ಟಿಮನಿ ರವರ ಮಾರ್ಗದರ್ಶನದಲ್ಲಿ ನೇಮಕ ಮಾಡಲಾಯಿತು.

ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಶರಣು ತೇಗಲತಿಪ್ಪಿ ನೇತೃತ್ವದಲ್ಲಿ ಪಟ್ಟಣದ ವಿದ್ಯಾರ್ಥಿಗಳ ಮತ್ತು ವಿವಿಧ ಸಂಘಟನೆಗಳ ಸಂಘಟನಾ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಗೌರವ ಅಧ್ಯಕ್ಷರಾಗಿ ಪ್ರವೀಣ ಬಿ.ಮೇತ್ರಿ, ಉಪಾಧ್ಯಕ್ಷರಾಗಿ ವಾಸಿಂ ಅಕ್ರಂ ಗಾರಂಪಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಗುರುಪ್ರಸಾದ ಪಾಟೀಲ್ ಅಣವಾರ, ಕಾರ್ಯದರ್ಶಿಗಳಾಗಿ ಅಭಿಷೇಕ ಐನೋಳ್ಳಿ, ಸಚಿನ್ ಎಸ್ ಚಿಮ್ಮಯಿದಲಾಯಿ, ವೀರೇಶ ಎಸ್ ಪಾಟೀಲ್ ಗೌಡನಹಳ್ಳಿ, ನಾಗರಾಜ ಹೊಸಮನಿ ಗಡಿಕೇಶ್ವರ, ಸಂಘಟನಾ ಕಾರ್ಯದರ್ಶಿಗಳಾಗಿ, ವಿಜಯಕುಮಾರ ಜೆ ಚಿಮ್ಮಯಿದಲಾಯಿ, ಅರವಿಂದ ಭಕ್ತಂಪಳ್ಳಿ, ಕಾರ್ತಿಕ ಡಿ ಕಲ್ಲೂರ ರೋಡ, ಸಂಪನ್ಮೂಲ ವ್ಯಕ್ತಿಗಳಾಗಿ ಅಶೋಕ್ ಬಾಬು ಕಲ್ಲೂರ ರೋಡ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಣಮಂತ ಕೋರಿ, ಪುಟ್ಟು ಬೀರನಹಳ್ಳಿ, ಪ್ರಭು, ವಿದ್ಯಾಸಾಗರ ಮಾಳಗೆ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News