ಕಲಬುರಗಿ | ಬಾಣಂತಿ ಸಾವಿಗೆ ನ್ಯಾಯ ದೊರಕಿಸುವಂತೆ ಮಾದಿಗ ಸಮಾಜದಿಂದ ಪ್ರತಿಭಟನೆ

Update: 2025-03-26 20:31 IST
Photo of Letter of appeal
  • whatsapp icon

ಕಲಬುರಗಿ : ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷ್ಯ ದಿಂದ ಬಾಣಂತಿ ಮೃತಪಟ್ಟಿದ್ದು, ವೈದ್ಯ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೇವರ್ಗಿ ತಾಲೂಕು ಮಾದಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.

ಜೇವರ್ಗಿ ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಗ್ರೇಡ್-2 ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು.

ಸಮುದಾಯದ ಜ್ಯೋತಿ ಅವರಿಗೆ ಹೆರಿಗೆ ನಂತರ ತೀವ್ರ ರಕ್ತ ಸ್ರಾವವಾಗುತ್ತಿತ್ತು. ಜೊತೆಗೆ ಹೊಟ್ಟೆ ಹಾಗೂ ಬೆನ್ನು ನೋವು, ಉಸಿರಾಟದ ತೊಂದರೆಯೂ ಆಗುತ್ತಿತ್ತು. ಬಾಣಂತಿ ನೋವಿನ ಬಗ್ಗೆ ವೈದ್ಯರಿಗೆ ಹೇಳಿದರೂ ಸ್ಪಂದಿಸಲಿಲ್ಲ. ಹೀಗಾಗಿ ಬಾಣಂತಿ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿಯೇ ಕಾರಣರಾಗಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದಿನ್ನಿ, ಸುಭಾಷ ಕಾಂಬಾಳೆ, ಭೀಮರಾಯ ಹಳ್ಳಿ, ಪರಶುರಾಮ ಮೂದಬಾಳ, ಗಂಗಾಧರ ವರ್ಚನಳ್ಳಿ, ಭೀಮರಾಯ ದೊಡಮನಿ, ಪರಶುರಾಮ ಜಮಖಂಡಿ, ಮಲ್ಲು ನರಿಬೋಳ, ವಿಜಯಕುಮಾರ ಯಲಗೋಡ, ಶರಣು ಹರನೂರ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News