ಕಲಬುರಗಿ | ಕೇಂದ್ರ ಸರಕಾರದ ನಡೆ ಖಂಡಿಸಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕಲಬುರಗಿ : ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿರುವ ಜಗತ್ ಸಿಂಗ್ ದಲ್ಲೇವಾಲ್ ಹೋರಾಟವನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಅಫಜಲಪುರ ತಾಲೂಕು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ದೇಶದ ಪ್ರಧಾನ ಮಂತ್ರಿ ಮೋದಿ ಅವರ ಪ್ರತಿಕೃತಿ ದಹನ ಮಾಡಿ ರೈತರಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕಬ್ಬು ಬೆಳೆಗಾರರ ಜಿಲ್ಲಾಧ್ಯಕ್ಷ ರಮೇಶ ಹೂಗಾರವರು ಮಾತನಾಡಿ, ರೈತ ಬೆಳೆದಂತ ಬೆಳೆಗೆ ಎಂಎಸ್ಪಿ ಖಾತ್ರಿ ಬೆಲೆ ಯೋಜನೆ ಕಾನೂನಿನ ಪ್ರಕಾರ ಜಾರಿಯಾಗಬೇಕು. ರೈತನ ಸಂಪೂರ್ಣ ಸಾಲಮನ್ನಾ ಆಗಬೇಕು. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಹೀಗೆ ಅನೇಕ ಬೇಡಿಕೆಗಳನ್ನಿಟ್ಟುಕೊಂಡು ಈ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದರು.
ರಾಷ್ಟ್ರೀಯ ನಾಯಕ ಜಗತ್ ಸಿಂಗ್ ದಲ್ಲೇ ವಾಲ ಅವರ ಉಪವಾಸ ಸತ್ಯಾಗ್ರಹ 46ನೇ ದಿನಕ್ಕೆ ಕಾಲಿಟ್ಟಿದ್ದು, ಅವರು ಸಾವು ಬದುಕಿನ ಬಗ್ಗೆ ಲೆಕ್ಕಿಸದೆ ಹೋರಾಟ ಮುಂದುವರಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಆತಂಕ ಸೃಷ್ಟಿಯಾಗಿದೆ, ಇನ್ನೂ ಸರ್ಕಾರ ಮೊಂಡತನ ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಕೂಡಲೇ ನಿದ್ದೆಯಿಂದ ಎಚ್ಚೆತ್ತುಕೊಂಡು. ರೈತರ ಬೇಡಿಕೆಗಳಿಗೆ ಸ್ಪಂದಿಸಿ. ಉಪವಾಸ ಸತ್ಯಾಗ್ರಹ ಕುಳಿತಿರುವ ಜಗತ್ ಸಿಂಗ್ ದಲ್ಲೇ ವಾಲ್ ಅವರ ಪ್ರಾಣ ಉಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ತಾಲೂಕಾಧ್ಯಕ್ಷ ಭಾಗಣ್ಣ ಕುಂಬಾರ, ರೇವಣಸಿದ್ದಯ್ಯ ಮಠ, ಶ್ರೀಮಂತ ಮ್ಯಾಕೇರಿ, ಬಸವರಾಜ್ ಹೇರೂರು, ಸಿದ್ದು ಪೂಜಾರಿ, ಕಂಟೆಪ್ಪ ಹದನೂರು, ಭಗವಂತ ಹೂಗಾರ್, ಶರಣಗೌಡ ಮಾಲಿಪಾಟೀಲ, ಬಸವರಾಜ್ ಬಂಕಲಗಿ, ದಾನು ನೂಲಾ, ಮಾಳಪ್ಪ ಪೂಜಾರಿ, ನಿಂಗಣ್ಣ ಕೆರಂಬಿಗಿ, ಮಲ್ಲನಗೌಡ ಪಾಟೀಲ್ ಸೇರಿದಂತೆ ಹಲವಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರಿದ್ದರು.