ಕಲಬುರಗಿ | ಮುಸ್ಲಿಂ ಮೀಸಲಾತಿ ಮರು ಸ್ಥಾಪನೆಗೆ ಒತ್ತಾಯಿಸಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ
Update: 2025-01-13 16:16 GMT
ಕಲಬುರಗಿ : ಅಲ್ಪಸಂಖ್ಯಾತರ 2 ಬಿ ಮೀಸಲಾತಿ ಮರು ಸ್ಥಾಪಿಸುವುದು, ಬಜೆಟ್ ನಲ್ಲಿ 10 ಕೋಟಿ ರೂ. ಮಿಸಲಿಡಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಗುಲ್ಬರ್ಗಾ ವರ್ಕಿಂಗ್ ವಿಮೆನ್ ಅಸೋಸಿಯೇಷನ್ ಅಧ್ಯಕ್ಷರಾದ ಶಹೆನಾಜ್ ಅಕ್ತರ್ ಅವರು ಮನವಿ ಸಲ್ಲಿಸಿದರು.
ಸೋಮವಾರ ನಗರದ ಹಳೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಬೇಡಿಕೆಗಳ ಆಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹ್ಮದ್ ಅವರಿಗೆ ಮನವಿ ಮಾಡಿದರು.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಸಮಸ್ಯೆ, ಮತ್ತು ಕೆ.ಎಮ್.ಡಿ.ಸಿ ಸಾಲ ಮೊತ್ತ ಹೆಚ್ಚಳ ಮತ್ತು ವಿದ್ಯಾರ್ಥಿಳಿಗೆ ಸಾಲ ಸೌಲಭ್ಯ ಮಸಿದಿಯ ಮೌಜನ್ ಗೌರವ ಧನ ಹೆಚ್ಚಳ, ಹಿಜಾಬ್ ಬ್ಯಾನ್ ರದ್ದು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.