ಕಲಬುರಗಿ | ಅಸ್ಪೃಶ್ಯತಾ ನಿವಾರಣೆ ಕುರಿತು ವಿಚಾರ ಸಂಕಿರಣ ಕಾರ್ಯಾಗಾರ

ಕಲಬುರಗಿ : ಕಾಳಗಿ ತಾಲೂಕಿನ ಕಾಳಗಿ ಹೋಬಳಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನಸಾಗರ ಏಜ್ಯುಕೇಶನ್ ಮತ್ತು ಕಲ್ಟರ್ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ವಿಚಾರ ಸಂಕಿರಣ ಕಾರ್ಯಾಗಾರ ಜರುಗಿತು.
ಕಾಳಗಿ ಉಪ ತಹಶೀಲ್ದಾರ್ ಸಂತೋಷ ಚಂದನಕೇರಾ ಉದ್ಘಾಟಿಸಿ ಮಾತನಾಡುತ್ತಾ, ಅಸ್ಪೃಶ್ಯತೆ ನಿವಾರಣೆ ಕುರಿತು ಬರುವ ದಿನಗಳಲ್ಲಿ ಸಮಾನತೆ, ಸಹಭಾಗಿತ್ವದೊಂದಿಗೆ ಎಲ್ಲರೂ ಸರಿ ಸಮಾನರಾಗಿ ಬಾಳೋಣ ಎಂದು ಕರೆ ನೀಡಿದರು.
ಮಹಿಳೆಯರೆಲ್ಲರಿಗೂ ಸಂವಿಧಾನದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಜಾತಿ ಜನಾಂಗಕ್ಕೆ ಹಾಗೂ ಮಹಿಳೆಯರಿಗೂ ಸಮಾನತೆಯ ಹಕ್ಕನ್ನು ಒದಗಿಸಿಕೊಟ್ಟರು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಾಳಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕಲಮೂಡಕರ ಮಾತನಾಡಿ, 12ನೇ ಶತಮಾನದಲ್ಲಿ ಎಲ್ಲಾ ಜಾತಿಯ ಜನರನ್ನು ಒಂದೇ ವೇದಿಕೆಗೆ ತಂದು ಬಸವಣ್ಣನವರು ಸಮಾನತೆಯನ್ನು ಸಾರಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೀರಪ್ಪ ಜೆ ಹಾದಿಮನಿ ವಹಿಸಿದ್ದರು. ಮಲ್ಲಿಕಾರ್ಜುನ ಗಂವ್ಹಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಗುಂಡೇರಾವ, ಸಂತೋಷ ಚಂದನಕೇರಾ, ರಮೇಶ, ಪೃಥ್ವಿರಾಜ, ಸಂಜೀವಕುಮಾರ ಕಟ್ಟಿಮನಿ ಸೇರಿದಂತೆ ಕಾಳಗಿ ಪಟ್ಟಣದ ಪ್ರಮುಖರು, ಜನಪ್ರತಿನಿಧಿಗಳು ಹಾಜರಿದ್ದರು.