ಕಲಬುರಗಿ | ಆಳಂದದಲ್ಲಿ ಕ್ರೀಡಾ ಕ್ಲಬ್ ಉದ್ಘಾಟನೆ

Update: 2025-03-13 20:44 IST
ಕಲಬುರಗಿ | ಆಳಂದದಲ್ಲಿ ಕ್ರೀಡಾ ಕ್ಲಬ್ ಉದ್ಘಾಟನೆ
  • whatsapp icon

ಕಲಬುರಗಿ : ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯುವಕರು ಅತಿಯಾದ ಮೊವೈಲ್ ಗೇಮ್‍ನಿಂದ ಹೊರಬಂದು ಕ್ರೀಡಾ ಚಟುವಟಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷರಾದ ನಿರಗುಡಿಯ ಹವಾ ಮಲ್ಲಯ್ಯಾ ಮುತ್ತ್ಯಾ ಅವರು ಹೇಳಿದರು.

ಆಳಂದ ಪಟ್ಟಣದ ಮಟಕಿರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಬಳಿಯಲ್ಲಿ ಎಎಲ್‍ಕ್ಯಾಪ್ಟನ್ ಕ್ರೀಡಾ ಬಾಕ್ಸ್ ಸ್ಫೋಟ್ರ್ಸ್ ಕ್ರೀಡಾ ಕ್ಲಬ್‍ನ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಸಲಹೆ ನೀಡಿದರು.

ಯುವಕರು ಮೊಬೈಲ್ ಗೇಮ್‍ಗಳ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಅವರ ಆರೋಗ್ಯಕರ ಭವಿಷ್ಯಕ್ಕೆ ಹಾನಿ ಆಗುತ್ತದೆ. ಆಸಕ್ತಿದಾಯ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಈ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ," ಈ ನಿಟ್ಟಿನಲ್ಲಿ ಸಾಗಬೇಕಾಗಿದೆ ಎಂದು ಹೇಳಿದರು.

ಕೆಎಮ್‍ಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ರವರು ಎಎಲ್ ಕ್ಯಾಪ್ಟನ್ ಕ್ರೀಡಾ ಕ್ಲಬ್‍ನ ಬಾಕ್ಸ್ ಸ್ಪೋಟ್ರ್ಸ್ ಅರೆನಾದನ್ನು ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿನ ಕ್ರೀಡಾ ಕ್ಲಬ್ ಕೊರತೆಯನ್ನು ಆರಂಭಿಸುವ ಮೂಲಕ ನಿವಾರಿಸಿದಂತಾಗಿದೆ. ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬ್ರೀಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಫೀಕ್ ಇನಾಮದಾರ ಅವರು ಮಾತನಾಡಿ, ಕ್ರೀಡೆಗಳಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಲಾಭಗಳಾದ ಹೃದಯ ರೋಗ, ಮಧುಮೇಹ, ಮತ್ತು ಮಿದುಳಿನ ತೊಂದರೆಗಳು ಶೇ.40 ರಷ್ಟು ಕಡಿಮೆಯಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ (Wಊಔ) ಪ್ರಕಾರ, ಶಾರೀರಿಕ ಕ್ರೀಡೆಗಳಿಂದ ಶೇ.25 ರಷ್ಟು ಕಳವಳ ಮತ್ತು ಒತ್ತಡದ ಸಮಸ್ಯೆಗಳು ಕಡಿಮೆಯಾಗುವ ಮಾಹಿತಿ ನೀಡಿವೆ. ಸಮೀಕ್ಷೆಯ ಪ್ರಕಾರ, ಶೇ.70ರಷ್ಟು ಯುವಕರು ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ಮೊಬೈಲ್ ಗೇಮ್‍ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಕ್ರೀಡೆಗಳು ಅವರ ಶಾರೀರಿಕ ಶಕ್ತಿ ಮತ್ತು ಸಮಯದ ಉತ್ತಮ ಬಳಕೆಗೆ ಈ ಕ್ಲಬ್ ಅನುಕೂಲವಾಗಲಿದೆ ಎಂದರು.

ತಂಡ ಕ್ರೀಡೆಗಳು (ಟೀಮ್ ಸ್ಪೋಟ್ರ್ಸ್) ಯುವಕರಲ್ಲಿ ತಂಡ ಚೈತನ್ಯ, ಶಿಸ್ತು, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಅಲ್ಲದೆ, ಕ್ರೀಡೆಗಳು ಯುವಕರಿಗೆ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತವೆ ಎಂದು ಹೇಳಿದರು.

ಇನ್ನೊರ್ವ ಅತಿಥಿ ಆಲ್‍ಫಾರುಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರೀಫ್ ಅಲಿ ಲಂಗಡೆ ಸೇರಿ ಹಾಜರಿದ್ದ ವೈದ್ಯರು ಮತ್ತು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಬ್ಲ್ ಸಂಸ್ಥಾಪಕ ಎಜಾಜ್ ಕ್ಯಾಪ್ಟನ್ ಮತ್ತು ಯೂಸುಫ್ ಅಲಿ ಇಂಡಿವಾಲೆ, ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ, ದರ್ಗಾ ಕಮೀಟಿ ಅಧ್ಯಕ್ಷ ಆಸೀಫ್ ಅನ್ಸಾರಿ, ಜಿಡಿಎಸ್ ಮೈನಾರೆಟಿ ರಾಜ್ಯ ಉಪಾಧ್ಯಕ್ಷ ಜಫರ್ ಅನ್ಸಾರಿ, ಆನಂದ ಎಸ್. ದೇಶಮುಖ, ದಯಾನಂದ ಶೇರಿಕಾರ, ದಿಲೀಪ್ ಕ್ಷೀರಸಾಗರ, ಸುಲೇಮಾನ ಮುಕುಟ್, ಸೈಯದ್ ಯಸೂಫ್ ಖಾಜಿ, ಡಾ. ಬಾಬ್ರೆ, ಡಾ. ಯೋಗೇಶ ಬಂಡಗಾರ, ಪಿಎಸ್‍ಐ ಭೀಮಾಶಂಕರ್ ಬಂಕ್ಲಿ, ಅನೇಕ ಕ್ರೀಡಾ ಆಸಕ್ತರು ಯುವಕರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News