ಕಲಬುರಗಿ | ದೀಪಾವಳಿ ಹಬ್ಬಕ್ಕೆ ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ ಜೆಸ್ಕಾಂ

Update: 2024-10-28 13:56 GMT

ಸಾಂದರ್ಭಿಕ ಚಿತ್ರ

ಕಲಬುರಗಿ : ದಿಪಾವಳಿ ಹಬ್ಬದ ಆಚರಣೆ ವೇಳೆ ವಿದ್ಯುತ್‌ ಅವಘಡಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಜೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಸ್ಕಾಂ ಅಧಿಕಾರಿಗಳು, ಸಾರ್ವಜನಿಕರು ಹಬ್ಬದ ಸಂದರ್ಭದಲ್ಲಿ ತಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವಂತೆ ಕೋರಿದ್ದಾರೆ. ಅಲ್ಲದೆ, ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿರುವ ಅಧಿಕಾರಿಗಳು, ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಿದ್ದಾರೆ.

ಮುಂಜಾಗ್ರತಾ ಕ್ರಮಗಳು :

►ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಸಂಬಂಧ ಪಟ್ಟ ಜೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು.

► ಸೀರಿಯಲ್‌ ಸೆಟ್ ಅಥವಾ ವಿದ್ಯುತ್ ದೀಪಗಳನ್ನು ಹಾಕುವಾಗ ವಿದ್ಯುತ್‌ ಕಂಬದಿಂದ ನೇರವಾಗಿ ಸಂಪರ್ಕ ಪಡೆಯಬಾರದು ಮತ್ತು ಅವುಗಳನ್ನು ಅಳವಡಿಸುವಾಗ ವಿದ್ಯುತ್‌ ತಂತಿಗಳ ಬಗ್ಗೆ ಗಮನಹರಿಸಬೇಕು. ಸೀರಿಯಲ್‌ ಲೈಟ್‌ ನ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್‌ ಆಗಿವೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು.

► ವಿದ್ಯುತ್‌ ಕಂಬ, ವಿದ್ಯುತ್ ಲೈನ್‌ನ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸಬಾರದು. 

►  ಅನುಮತಿ ಇಲ್ಲದೆ ವಿದ್ಯುತ್‌ ಸಂಪರ್ಕಗಳನ್ನು ಪಡೆಯಬಾರದು. ಆ ಮೂಲಕ ಓವರ್‌ಲೋಡ್‌ ಮಾಡುವುದನ್ನು ತಪ್ಪಿಸಸಬೇಕು.

► ಬಳಕೆಯಲ್ಲಿಲ್ಲದಿದ್ದಾಗ ವಿದ್ಯುತ್ ದೀಪಳನ್ನು ಆಫ್‌ ಮಾಡಬೇಕು.

► ಒಡೆದ ಇನ್ಸುಲೇಷನ್ ಇರುವ ಕೇಬಲ್‌ಗಳು ಮತ್ತು ಅರ್ಥಿಂಗ್ ವೈರ್ ಇಲ್ಲದ ಕೇಬಲ್‌ಗಳನ್ನು ಯಾವುದೇ ಸಲಕರಣೆಗಳಿಗೆ ಬಳಸಬಾರದು.

► ಸಂಭ್ರಮದ ವೇಳೆ ಯಾವುದೇ ವಿದ್ಯುತ್‌ ಸಂಬಂಧಿತ ತೊಂದರೆಗಳಾದರೆ ಹತ್ತಿರದ ಜೆಸ್ಕಾಂ ಶಾಖಾ ಕಚೇರಿಗೆ ತಿಳಿಸಬೇಕು ಅಥವಾ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆಮಾಡಿ ಮಾಹಿತಿ ನೀಡಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News