ಕಲಬುರಗಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಶಕೀಲ್ ಸರಡಗಿ ಆಯ್ಕೆ

ಕಲಬುರಗಿ: ಇತ್ತೀಚೆಗೆ ಕಲಬುರಗಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಕೀಲ್ ಸರಡಗಿ ಅವರು 2508 ಮತಗಳು ಪಡೆಯುವ ಮೂಲಕ ಭರ್ಜರಿ ಗೆಲವು ಸಾಧಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
22 ಸೆಪ್ಟೆಂಬರ್ 2024 ರಂದು ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಿತ್ತು. ಶುಕ್ರವಾರ ರಾತ್ರಿ ಫಲಿತಾಂಶ ಪ್ರಕಟವಾಗಿದೆ. ತಮ್ಮ ಚಿಕ್ಕಪ್ಪ ಮಾಜಿ ಸಂಸದ ದಿವಂಗತ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸ್ಮರಿಸಿದ ಶಕೀಲ್ ಸರಡಗಿ, ಚಿಕ್ಕಪ್ಪನ ಹಾದಿಯಲ್ಲೇ ರಾಜಕೀಯ ಪ್ರಯಾಣ ನಡೆಸುವುದಾಗಿ ತಿಳಿಸಿದ್ದಾರೆ.
ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೆ ಬೆಂಬಲವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಕನೀಜ್ ಫಾತಿಮಾ, ಕೆಪಿಸಿಸಿ ಸದಸ್ಯ ಫರಾಜ್ ಉಲ್ ಇಸ್ಲಾಂ, ಕುಡಾ ಅಧ್ಯಕ್ಷ ಮಜರ್ ಅಲಂ ಖಾನ್, ಮಾಜಿ ಕಾರ್ಪೊರೇಟರ್ ಸಮದ್ ಸರಡಗಿ, ನೂರ್ ಉಲ್ ಇಸ್ಲಾಂ ಜೈದ್, ನಜ್ಮುಲ್ ಇಸ್ಲಾಂ ಅಹ್ಮರ್, ವಹೇದ್ ಅಲಿ ಫತೇಖಾನಿ, ಡಾ. ಕಿರಣ್ ದೇಶಮುಖ್, ಪ್ರವೀಣ್ ಹರ್ವಾಲ್, ಫಾರೂಕ್ ಮಣಿಯಾಲ್ ಮತ್ತು ಪಕ್ಷದ ಹಿರಿಯ ರಾಜಕೀಯ ನಾಯಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28