ಪ್ರೊ.ಮುಝಫರ್ ಅಸ್ಸಾದಿ ಪ್ರಬುದ್ಧ, ಪ್ರಕರ ಪಾಂಡಿತ್ಯವನ್ನು ಹೊಂದಿದ್ದರು: ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರೊ. ಆರ್. ಇಂದಿರಾ

Update: 2025-01-11 17:50 GMT

ಮೈಸೂರು: ಪ್ರೊ.ಮುಝಫರ್ ಅಸ್ಸಾದಿ ಅವರು ಪ್ರಬುದ್ದ, ಪ್ರಕರ ಪಾಂಡಿತ್ಯ ಹೊಂದಿದ್ದವರು. ಬೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರು ಸದಾಕಾಲ ನಮ್ಮ ನಡುವೆಯೇ ಇದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್. ಇಂದಿರಾ ಹೇಳಿದರು.

ವಿಜಯನಗರದ ಮೂರನೇ ಹಂತದಲ್ಲಿರುವ ಕಲ್ಪಕ್ಷೇತ್ರ ಆಡಿಟೋರಿಯಂನಲ್ಲಿ ಶನಿವಾರ ಮೈಸೂರು ಓಪನ್ ಫೋರಂ ವತಿಯಿಂದ ಆಯೋಜಿಸಿದ್ದ ಪ್ರೊ.ಮುಝಫರ್ ಅಸ್ಸಾದಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರೊ.ಮುಝಫರ್ ಅಸ್ಸಾದಿ ಅವರು ಜಾತಿವ್ಯವಸ್ಥೆ, ಶ್ರೇಣಿಕೃತ ವ್ಯವಸ್ಥೆಯಿಂದ ಹೊರಗಿದ್ದವರು. ತಮಗಿಂತ ಕಿರಿಯರಿಗೂ ಗೌರವಕೊಡುತ್ತಿದ್ದರು. ಅವರು ಎಂದೂ ಸ್ವಾರ್ಥಕ್ಕಾಗಿ ಬದುಕಿದವರಲ್ಲ ಎಂದು ನೆನಪು ಮಾಡಿಕೊಂಡರು.

ಕನ್ನಡ, ಇಂಗ್ಲಿಷ್ ನಲ್ಲಿ ಅದ್ಭುತವಾಗಿ ಬರೆಯುತ್ತಿದ್ದರು ಮತ್ತು ಮಾತನಾಡುತ್ತಿದ್ದರು.‌ ಯಾವುದೇ ಒಂದು ವಿಚಾರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಮಾತನಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಗುಣಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.

ಪ್ರೊ.ಮುಝಫರ್ ಅಸ್ಸಾದಿ ವಯಸ್ಸಿನ ಕಾರಣಕ್ಕೆ ನಿವೃತ್ತಿಯಾಗಿದ್ದರೇ ಹೊರತು, ಅವರ ಜ್ಞಾನಕ್ಕೆ ವಯಸ್ಸಾಗಿರಲಿಲ್ಲ. ಜಾತಿ ಧರ್ಮ, ಮಹಿಳೆಯರ, ಆದಿವಾಸಿಗಳ ಬಗ್ಗೆ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಇಂತಹ ಒಬ್ಬ ವಿಚಾರವಂತ ಬುದ್ಧಿವಂತರನ್ನು ಒಂದು ದಿನ ಮಾತ್ರ ನೆನಪು ಮಾಡಿಕೊಳ್ಳದೆ ಸದಾಕಾಲ ಅವರು ಅವರನ್ನು ನೆನೆಪು ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರವಿ ಜೋಶಿ, ಪ್ರೊ.ಉಮಾಪತಿ, ಪ್ರೊ.ಕೃಷ್ಣ, ಪ್ರೊ.ಇಂದಿರಾ, ಸಿ.ಪಿ.ವಿ.ಗುಪ್ತಾ, ಶಂಕರ. ನಿವೃತ್ತ ಮೇಜರ್ ಜನರಲ್ ಒಂಬತ್ಕರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News