ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಒಡಿಶಾದ ಬಿಜೆಪಿ ಸಂಸದ ಮಹತಾಬ್ ನೇಮಕ

Update: 2024-06-20 21:36 IST
ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಒಡಿಶಾದ ಬಿಜೆಪಿ ಸಂಸದ ಮಹತಾಬ್ ನೇಮಕ

ಬಿಜೆಪಿ ಸಂಸದ ಮಹತಾಬ್ | PC: X \ @shwetankbhushan

  • whatsapp icon

ಹೊಸದಿಲ್ಲಿ : ಒಡಿಶಾದ ಬಿಜೆಪಿಯ ಪ್ರಮುಖ ನಾಯಕ ಭರ್ತೃಹರಿ ಮಹತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ನೂತನ ಸಭಾಧ್ಯಕ್ಷರ ಆಯ್ಕೆಯವರೆಗೆ ಸ್ಪೀಕರ್ ಕರ್ತವ್ಯಗಳನ್ನು ನಿರ್ವಹಿಸಲು ಸಂವಿಧಾನದ 95 (1) ನೇ ವಿಧಿಯ ಅಡಿಯಲ್ಲಿ ಹಂಗಾಮಿ ಸ್ಪೀಕರ್ ಆಗಿ ಲೋಕಸಭೆಯ ಸದಸ್ಯ ಭರ್ತೃಹರಿ ಮಹತಾಬ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಿಸಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

“ಹೊಸದಾಗಿ ಆಯ್ಕೆಯಾದವರಿಗೆ ಪ್ರಮಾಣ ವಚನದ ವೇಳೆ ಹಂಗಾಮಿ ಸ್ಪೀಕರ್ ಅವರಿಗೆ ನೆರವಾಗಲು ಸಂವಿಧಾನದ 99ನೇ ವಿಧಿಯ ಅಡಿಯಲ್ಲಿ ಲೋಕಸಭೆಯ ಸದಸ್ಯರಾದ ಸುರೇಶ್ ಕೋಡಿಕುನ್ನಿಲ್, ತಾಳಿಕ್ಕೋಟ್ಟೈ ರಾಜುತೇವರ್ ಬಾಲು, ರಾಧಾ ಮೋಹನ್ ಸಿಂಗ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಸುದೀಪ್ ಬಂಡೋಪಾಧ್ಯಾಯ ಅವರನ್ನೂ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ” ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News