ಉದಯನಿಧಿ ಸ್ಟಾಲಿನ್ ತಲೆಗೆ 10 ಕೋ.ರೂ. ಬಹುಮಾನ ಘೋಷಣೆ ಮಾಡಿದ ಮಹಾಂತ ಪರಮಹಂಸ ದಾಸ್
Update: 2023-09-04 18:23 GMT
ಲಕ್ನೊ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಅಯೋಧ್ಯಾ ತಪಸ್ವಿ ಛಾವನಿಯ ಮಹಾಂತ ಪರಮಹಂಸ ದಾಸ್ ಅವರು ಸೋಮವಾರ ಘೋಷಿಸಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಹಾಂತ ಪರಮಹಂಸ ದಾಸ್ ಅವರು ಈ ಘೋಷಣೆ ಮಾಡಿದ್ದಾರೆ.
ಅಲ್ಲದೇ, ಅವರು ಉದಯನಿಧಿ ಸ್ಟಾಲಿನ್ ಅವರ ತಲೆಯನ್ನು ಸಾಂಕೇತಿಕವಾಗಿ ಕತ್ತರಿಸಿದ್ದಾರೆ. ‘ಸನಾತನ ಧರ್ಮ’ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿ ಇದೆ. ಕಳೆದ 2000 ವರ್ಷಗಳಲ್ಲಿ ಹಲವು ಧರ್ಮಗಳು ಬಂದಿವೆ ಹೋಗಿವೆ. ಆದರೆ, ಸನಾತನ ಧರ್ಮ ಮಾತ್ರ ಭೂಮಿಯಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ ಎಂದು ಅವರು ಹೇಳಿದ್ದಾರೆ.