ವಂಚನೆ ಪ್ರಕರಣದ ಆರೋಪಿಗೆ 170 ವರ್ಷ ಜೈಲು!

34 ಮಂದಿಯನ್ನು ವಂಚಿಸಿದ ಆರೋಪಿಯೊಬ್ಬನಿಗೆ ಸಾಗರ ಸೆಷನ್ಸ್ ನ್ಯಾಯಾಲಯ 170 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Update: 2023-06-30 07:10 GMT

ಭೋಪಾಲ್: ಜವಳಿ ಫ್ಯಾಕ್ಟರಿ ಆರಂಭಿಸುವುದಾಗಿ ಸುಳ್ಳು ಭರವಸೆ ನೀಡಿ 34 ಮಂದಿಯನ್ನು ವಂಚಿಸಿದ ಆರೋಪಿಯೊಬ್ಬನಿಗೆ ಸಾಗರ ಸೆಷನ್ಸ್ ನ್ಯಾಯಾಲಯ 170 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 72 ಲಕ್ಷ ರೂಪಾಯಿ ವಂಚಿಸಿದ ಆರೋಪ ಈತನ ಮೇಲಿತ್ತು.

ಕಳೆದ ಮಾರ್ಚ್ ನಲ್ಲಿ ಮಧ್ಯ ಪ್ರದೇಶದ ಸೆಹೋರ್ ನ್ಯಾಯಾಲಯ ಚಿಟ್ ಫಂಡ್ ಕಂಪೆನಿಯ ನಿರ್ದೇಶಕನಿಗೆ ವಿಧಿಸಿದ 250 ವರ್ಷ ಅವಧಿಯ ಜೈಲು ಶಿಕ್ಷೆ ದೇಶದ ನ್ಯಾಯಾಂಗ ಇತಿಹಾಸದಲ್ಲೇ ಸುದೀರ್ಘ ಶಿಕ್ಷೆ ಎನಿಸಿತ್ತು. ಈ ಪ್ರಕರಣಲ್ಲಿ 35 ಲಕ್ಷ ಮಂದಿ ವಂಚನೆಗೆ ಒಳಗಾಗಿದ್ದು, 4000 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊರಿಸಲಾಗಿತ್ತು.

ಪ್ರಸಕ್ತ ಪ್ರಕರಣದಲ್ಲಿ ಗುಜರಾತ್ ನ ತಾ34 ಮಂದಿಯನ್ನು ವಂಚಿಸಿದ ಆರೋಪಿಯೊಬ್ಬನಿಗೆ ಸಾಗರ ಸೆಷನ್ಸ್ ನ್ಯಾಯಾಲಯ 170 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 72 ಲಕ್ಷ ರೂಪಾಯಿ ವಂಚಿಸಿದ ಆರೋಪ ಈತನ ಮೇಲಿತ್ತು.ಪಿ ಮೂಲದ ಆರೋಪಿ ನಾಸಿರ್ ಮುಹಮ್ಮದ್ ಅಲಿಯಾಸ್ ನಾಸಿರ್ ರಜಪೂತ್ (55) ಎಂಬಾತನಿಗೆ 170 ವರ್ಷಗಳ ಜೈಲು ಶಿಕ್ಷೆಯ ಜತೆಗೆ ಪ್ರತಿ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ಪಾವತಿಸುವಂತೆಯೂ ಆದೇಶಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅನ್ವಯ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಗೆ ಅವಕಾಶವಿದೆ. ಇದರಲ್ಲಿ ನಾಸಿರ್ ಗೆ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿದೆ.

ಸೆಷನ್ ನ್ಯಾಯಾಧೀಶ ಅಬ್ದುಲ್ ಅಹ್ಮದ್ ತೀರ್ಪಿನಲ್ಲಿ ಹೇಳಿರುವಂತೆ, "ಆಪಾದಿತ ವ್ಯಕ್ತಿ 34 ಮಂದಿಗೆ ವಂಚಿಸಿದ್ದಾನೆ. ಪ್ರತಿ ವ್ಯಕ್ತಿಗೆ ವಂಚಿಸಿದ ಸಂಬಂಧ ಕೂಡಾ ಶಿಕ್ಷೆ ವಿಧಿಸುವುದು ಅಗತ್ಯ. ಏಕೆಂದರೆ ಆರೋಪಿ ಪ್ರತಿ ಸಂತ್ರಸ್ತನ ಸಂಬಂಧ ಎಸಗಿರುವ ಅಪರಾಧಗಳ ಹೊಣೆ ಪ್ರತ್ಯೇಕ". ಹೀಗೆ 34 ಪ್ರಕರಣಗಳಲ್ಲಿ ತಲಾ 5 ವರ್ಷಗಳಂತೆ ಒಟ್ಟು 170 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News