ಸೋಮವಾರ 2,416 ಕೋ.ರೂ. ಮೌಲ್ಯದ 1.44 ಲಕ್ಷ ಕೆ.ಜಿ ಮಾದಕ ದ್ರವ್ಯ ನಾಶ

Update: 2023-07-16 18:20 GMT

 ಅಮಿತ್ ಶಾ | Photo: PTI 

ಹೊಸದಿಲ್ಲಿ: ದೇಶದ ವಿವಿಧ ಭಾಗದಲ್ಲಿ 2,416 ಕೋ.ರೂ. ಮೌಲ್ಯದ 1,44 ಲಕ್ಷ ಕೆ.ಜಿ.ಗೂ ಅಧಿಕ ಮಾದಕ ದ್ರವ್ಯವನ್ನು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವರ್ಚುವಲ್ ಉಪಸ್ಥಿತಿಯಲ್ಲಿ ನಾಶಪಡಿಸಲು ನಿರ್ಧರಿಸಲಾಗಿದೆ.

ಹೊಸದಿಲ್ಲಿಯಲ್ಲಿ ಸೋಮವಾರ ನಡೆಯಲಿರುವ ‘‘ಮಾದಕ ದ್ರವ್ಯ ಸಾಗಾಟ ಹಾಗೂ ರಾಷ್ಟ್ರೀಯ ಭದ್ರತೆ’’ ಕುರಿತ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಂದರ್ಭ ಅಮಿತ್ ಶಾ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ವೀಕ್ಷಿಸುತ್ತಿದ್ದಂತೆ ದೇಶದ ವಿವಿಧ ನಗರಗಲ್ಲಿ ಈ ಮಾದಕ ದ್ರವ್ಯ ನಾಶ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ನಾಶಪಡಿಸಲಾಗುವ ಮಾದಕ ದ್ರವ್ಯದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೊ (ಎನ್ಸಿಬಿ)ದ ಹೈದರಾಬಾದ್ ವಶಪಡಿಸಿಕೊಂಡ 6,590 ಕೆ.ಜಿ, ಇಂದೋರ್ ಘಟಕ ವಶಪಡಿಸಿಕೊಂಡ 822 ಕೆ.ಜಿ. ಹಾಗೂ ಜಮ್ಮು ಘಟಕ ವಶಪಡಿಸಿಕೊಂಡ 356 ಕೆ.ಜಿ. ಸೇರಿದೆ.

ಇದರೊಂದಿಗೆ ವಿವಿಧ ರಾಜ್ಯಗಳ ಜಾರಿ ನಿರ್ದೇಶಾನಲಯ ಸಂಸ್ಥೆಗಳು ಕೂಡಾ ಮಾದಕ ದ್ರವ್ಯವನ್ನು ನಾಶ ಮಾಡಲಿವೆ. ಅಸ್ಸಾಂನಲ್ಲಿ 1,486 ಕೆ.ಜಿ, ಚಂಡಿಗಢದಲ್ಲಿ 229 ಕೆ.ಜಿ, ಗೋವಾದಲ್ಲಿ 25 ಕೆ.ಜಿ, ಗುಜರಾತ್ನಲ್ಲಿ 4,277 ಕೆ.ಜಿ., ಹರ್ಯಾಣದಲ್ಲಿ 2,458 ಕೆ.ಜಿ., ಜಮ್ಮು ಹಾಗೂ ಕಾಶ್ಮೀರದಲ್ಲಿ 4,069 ಕೆ.ಜಿ., ಮಧ್ಯಪ್ರದೇಶದಲ್ಲಿ 1,03,884 ಕೆ.ಜಿ. ಮಹಾರಾಷ್ಟ್ರದಲ್ಲಿ 159 ಕೆ.ಜಿ., ತ್ರಿಪುರಾದಲ್ಲಿ 1,803 ಕೆ.ಜಿ., ಉತ್ತರಪ್ರದೇಶದಲ್ಲಿ 4,049 ಕೆ.ಜಿ ಮಾದಕ ದ್ರವ್ಯಗಳನ್ನು ನಾಶಮಾಡಲಾಗುವುದು ಎಂದು ಅದು ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News