RTI ಅರ್ಜಿಗೆ 40 ಸಾವಿರ ಪುಟಗಳ ಉತ್ತರ: ದಾಖಲೆಗಳ ಸಾಗಾಟಕ್ಕೆ ವಾಹನ ಬಳಸಬೇಕಾಯಿತು ಅರ್ಜಿದಾರ!

Update: 2023-07-30 10:21 IST
RTI ಅರ್ಜಿಗೆ 40 ಸಾವಿರ ಪುಟಗಳ ಉತ್ತರ: ದಾಖಲೆಗಳ ಸಾಗಾಟಕ್ಕೆ ವಾಹನ ಬಳಸಬೇಕಾಯಿತು ಅರ್ಜಿದಾರ!
  • whatsapp icon

ಇಂಧೋರ್: ಕೋವಿಡ್-19 ಸಾಂಕ್ರಾಮಿಕಕ್ಕೆ ಸೇರಿದಂತೆ ಅರ್ಜಿ ಸಲ್ಲಿಸಿದ್ದ ಮಾಹಿತಿ ಹಕ್ಕುಗಳ ಹೋರಾಟಗಾರರೊಬ್ಬರಿಗೆ ಇಲಾಖೆ 40 ಸಾವಿರ ಪುಟಗಳ ಉತ್ತರ ನೀಡಿದ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ. ಆರ್‍ಟಿಐ ಉತ್ತರದ ದಾಖಲೆಗಳನ್ನು ಅರ್ಜಿದಾರ ಎಸ್‍ಯುವಿ ವಾಹನದಲ್ಲಿ ತುಂಬಿಕೊಂಡು ಹೋಗಬೇಕಾಯಿತು.

ಆದರೆ ಮಾಹಿತಿ ಹಕ್ಕು ಕಾಯ್ದೆಯ ಅನುಸಾರ ಒಂದು ತಿಂಗಳ ಒಳಗಾಗಿ ಇಲಾಖೆ ಮಾಹಿತಿ ನೀಡದ ಕಾರಣ, ಕಾನೂನಾತ್ಮಕವಾಗಿ ನಿಗದಿಪಡಿಸಿದಂತೆ ಪ್ರತಿ ಪುಟಕ್ಕೆ 2 ರೂಪಾಯಿಯನ್ನು ಅರ್ಜಿದಾರ ಧರ್ಮೇಂದ್ರ ಶುಕ್ಲಾ ನೀಡದೇ ಉತ್ತರ ಪಡೆಯಲು ಸಾಧ್ಯವಾಯಿತು.

"ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಔಷಧಿ, ಸಾಧನ ಸಲಕರಣೆಗಳು ಮತ್ತು ಪೂರಕ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಕರೆದ ಟೆಂಡರ್ ವಿವರಗಳು ಮತ್ತು ಪಾವತಿ ಮಾಡಿರುವ ಬಿಲ್ ವಿವರಗಳನ್ನು ನೀಡುವಂತೆ ನಾನು ಇಂದೋರ್‍ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೆ" ಎಂದು ಶುಕ್ಲಾ ವಿವರಿಸಿದ್ದಾರೆ.

ಒಂದು ತಿಂಗಳ ಒಳಗಾಗಿ ಮಾಹಿತಿ ನೀಡದ ಕಾರಣ ಅವರು ಮೊದಲ ಮೇಲ್ಮನವಿ ಅಧಿಕಾರಿ ಡಾ.ಶರದ್ ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು. ಇದನ್ನು ಸ್ವೀಕರಿಸಿದ ಗುಪ್ತಾ, ಈ ಮಹಿತಿಯನ್ನು ಉಚಿತವಾಗಿ ನೀಡುವಂತೆ ಸೂಚನೆ ನೀಡಿದರು.

ಈ ದಾಖಲೆಗಳನ್ನು ಸಾಗಿಸಲು ನಾನು ಎಸ್‍ಯುವಿ ವಾಹನ ತರಬೇಕಾಯಿತು. 40 ಸಾವಿರ ಪುಟಗಳ ದಾಖಲೆಯಿಂದ ಅದು ಭರ್ತಿಯಾಯಿತು. ಕೇವಲ ಚಾಲಕನ ಆಸನ ಮಾತ್ರ ಖಾಲಿ ಇತ್ತು" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News