ಸುರಂಗ ಕುಸಿತ: ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ; ಕಾರ್ಮಿಕರು ಹೊರಬರಲು ಕ್ಷಣಗಣನೆ

Update: 2023-11-28 11:34 GMT

Photo: PTI

ಉತ್ತರಕಾಶಿ: ಉತ್ತರಖಾಂಡ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದ್ದು, ಸಿಕ್ಕಿಬಿದ್ದಿರುವ 41 ಕಾರ್ಮಿಕರನ್ನು ಹೊರ ಕರೆತರಲು ಮಾತ್ರ ಬಾಕಿ ಇದೆ.

ಕಾರ್ಮಿಕರು ಹೊರ ಬರಲು ಹಾದಿಯನ್ನು ಸುಗಮಗೊಳಿಸಿದ್ದು, ಕಾರ್ಮಿಕರನ್ನು ಹೊರ ತೆಗೆಯುತ್ತಿದ್ದಂತೆ ಚಿಕಿತ್ಸೆಗೆ ದಾಖಲಿಸಲು ಆಂಬ್ಯುಲೆನ್ಸ್‌ಗಳನ್ನು ಸಜ್ಜಾಗಿ ಇರಿಸಲಾಗಿದೆ. .

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದಾರೆ.

ಅಗರ್‌ ಯಂತ್ರದಲ್ಲಿ ದೋಷ ಕಂಡ ಬಳಿಕ ನಿನ್ನೆಯಿಂದ ಹಸ್ತಚಾಲಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News