ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗಳಿಗೆ ಬೂಟು ಕಾಲಿನಿಂದ ಒದ್ದಿದ್ದ ಪೊಲೀಸ್ ಅಧಿಕಾರಿ ಅಮಾನತು
ಹೊಸದಿಲ್ಲಿ : ದಿಲ್ಲಿಯ ಇಂದರ್‌ಲೋಕ್‌ನಲ್ಲಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ ಸಬ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ತೋಮರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ದಿಲ್ಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಮನೋಜ್ ಮೀನಾ ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ
ಇಂದರ್ ಲೋಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಐ ತೋಮರ್ ಅವರು ಒದೆಯುತ್ತಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ವೀಡಿಯೊದಲ್ಲಿ, ಎಸ್ಐ ತೋಮರ್ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಪುರುಷರನ್ನು ಒದೆಯುವುದು ಮತ್ತು ಕಪಾಳಮೋಕ್ಷ ಮಾಡುವುದು ಸೆರೆಯಾಗಿದೆ. ನಮಾಝ್ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕೂಗಾಡುತ್ತಾ, ಎದ್ದೇಳಲು ಮತ್ತು ಪ್ರದೇಶವನ್ನು ತೊರೆಯುವಂತೆ ಹೇಳುವುದು ವೀಡಿಯೋದಲ್ಲಿದೆ.
ಶುಕ್ರವಾರ ಇಂದರ್‌ಲೋಕ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಜನರು ನಮಾಜ್ ಸಲ್ಲಿಸುತ್ತಿದ್ದರು. ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಲಾಗಿದೆಯೇ ಎನ್ನುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
सिर्फ कुछ मिनट की जुम्मे की नमाज अदा करते हुए नमाजियों को एक पुलिस वाला लाते मार कर उनकी नमाज खराब करता हुआ दिख रहा है,इस जगह से कुछ ही दूर दिल्ली मिनोरिटी के चेयरमैन @AbdulWahidINC जी का घर है, उम्मीद है वो और @ArvinderLovely जी कुछ संज्ञान लेंगे और दिल्ली पुलिस से बात करेंगे। pic.twitter.com/WE21TXx8Gs
— Ashfaque Nabi (@AshfaqueNabi) March 8, 2024