ಬಿಹಾರ: ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿ ಭೂಪೇಶ್‌ ಬಘೇಲ್ ನೇಮಕ

Update: 2024-01-27 23:34 IST
ಬಿಹಾರ: ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿ ಭೂಪೇಶ್‌ ಬಘೇಲ್ ನೇಮಕ

Photo: PTI

  • whatsapp icon

ಹೊಸದಿಲ್ಲಿ : ಬಿಹಾರದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಮತ್ತು ಪಕ್ಷದ ಇತರ ಚಟುವಟಿಕೆಗಳ ಸಮನ್ವಯಕ್ಕಾಗಿ ಹಿರಿಯ ವೀಕ್ಷಕರನ್ನಾಗಿ ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಅವರನ್ನು ಕಾಂಗ್ರೆಸ್ ಶನಿವಾರ ನೇಮಕಗೊಳಿಸಿದೆ. ಈ ನೇಮಕವು ತಕ್ಷಣದಿಂದಲೇ ಜಾರಿಗೆ ಬಂದಿದೆ.

ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಗೆ ಮರಳಬಹುದು ಎಂಬ ಬಲವಾದ ಸುಳಿವುಗಳ ನಡುವೆ ಬಿಹಾರದಲ್ಲಿ ಅಧಿಕಾರ ರಾಜಕಾರಣವು ತೀವ್ರಗೊಂಡಿರುವ ಸಮಯದಲ್ಲೇ ಈ ನೇಮಕ ನಡೆದಿದೆ.

‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಮತ್ತು ಪಕ್ಷದ ಇತರ ಚಟುವಟಿಕೆಗಳ ಸಮನ್ವಯಕ್ಕಾಗಿ ಹಿರಿಯ ವೀಕ್ಷಕರನ್ನಾಗಿ ಭೂಪೇಶ್‌ ಬಘೇಲ್ ಅವರನ್ನು ನೇಮಕಗೊಳಿಸಿದ್ದಾರೆ ’ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯಯಾತ್ರೆಯು ಜ.29ರಂದು ಪಶ್ಚಿಮ ಬಂಗಾಳದಿಂದ ಬಿಹಾರವನ್ನು ಪ್ರವೇಶಿಸುವ ನಿರೀಕ್ಷೆಯಿದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News